ಖುಷ್ ಬೂ, ಈಗ ರಾಜಕಾರಣಿಯೇ ಇರಬಹುದು. ಆದರೆ.. ಕನ್ನಡಿಗರಿಗೆ ಆಕೆ ಚಿತ್ರನಟಿಯಾಗಿ, ರಣಧೀರನ ರಾಣಿಯಾಗಿಯೇ ಚಿರಪರಿಚಿತ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಖುಷ್ ಬೂಗೆ ಈಗ ಗೌರವ ಡಾಕ್ಟರೇಟ್ ಸಂದಿದೆ.
ಅಮೆರಿಕದ ಇಂಟರ್ನ್ಯಾಷನಲ್ ತಮಿಳ್ ಯುನಿವರ್ಸಿಟಿ ಖುಷ್ ಬೂ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಖುಷ್ ಬೂ ಅವರ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಈ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಲಾಗಿದೆ.