` ಸಾಮಾನ್ಯನೊಬ್ಬ ಸ್ಟಾರ್ ಆಗುವ ಕಥೆಗೆ ಗುರು ಆ್ಯಕ್ಷನ್ ಕಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
guru deshpande's next with ajai rao
Guru Deshpande, Ajai Rao

ಗುರು ದೇಶಪಾಂಡೆ ಮತ್ತೊಮ್ಮೆ ನಿರ್ದೇಶನದ ಅಖಾಡಕ್ಕಿಳಿಯುತ್ತಿದ್ದಾರೆ. ಹೊಸ ಪ್ರತಿಭೆಯನ್ನು ಗುರುತಿಸಿ ನಿರ್ದೇಶನದ ಅವಕಾಶ ಕೊಟ್ಟು `ಜಂಟಲ್‍ಮನ್'ನಂತಾ ಸ್ಪೆಷಲ್ ಚಿತ್ರ ಕೊಟ್ಟು ಪ್ರೇಕ್ಷಕರ ಮನಸ್ಸು ಗೆದ್ದ ಗುರು ದೇಶಪಾಂಡೆ ಈಗ ಹೊಸದೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ರೆಡಿ.

ಹೊಸ ಚಿತ್ರಕ್ಕೆ ಅಜೇಯ್ ರಾವ್ ನಾಯಕ. ಗುರು ದೇಶಪಾಂಡೆ ಅವರದ್ದೇ ಬ್ಯಾನರ್‍ನಲ್ಲಿ ಅಜೇಯ್ ರಾವ್-ಮಾನ್ವಿತಾ ಕಾಮತ್ ಕಾಂಬಿನೇಷನ್ನಿನಲ್ಲಿ ರೇನ್ ಬೋ ಚಿತ್ರ ಸೆಟ್ಟೇರಿತ್ತು. ಆ ಚಿತ್ರಕ್ಕೆ ಈಗ ತಾತ್ಕಾಲಿಕ ಬ್ರೇಕ್ ಕೊಟ್ಟು ಈ ಚಿತ್ರಕ್ಕೆ ಜೀವ ಕೊಡುತ್ತಿದ್ದಾರೆ ಗುರು ದೇಶಪಾಂಡೆ.

2000ನೇ 2020ರವರೆಗೆ ಯಾರೆಲ್ಲ ಹೊಸ ಹೊಸ ಸ್ಟಾರ್‍ಗಳು ಬಂದಿದ್ದಾರೋ.. ಅವರೆಲ್ಲರ ಕಥೆಯೂ ಈ ಚಿತ್ರದಲ್ಲಿರುತ್ತದೆ ಎನ್ನುವ ಗುರು ದೇಶಪಾಂಡೆ, ಇದು ಕನ್ನಡದ ಎಲ್ಲ ನಟರ ಬಯೋಪಿಕ್ ಎನ್ನುತ್ತಾರೆ. ಯುಗಾದಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಏಪ್ರಿಲ್ 2ನೇ ವಾರದಿಂದ ಶೂಟಿಂಗ್ ಶುರು.