ಶಿವರಾತ್ರಿಯ ದಿನ ಕಾಶಿಗೆ ಪಾದಾರ್ಪಣೆ ಮಾಡಿದ್ದ ಮದಗಜ ತಂಡ ಒಂದು ಅದ್ಭುತ ಅನುಭವದೊಂದಿಗೆ ವಾಪಸ್ ಆಗಿದೆ. ನಟ ಶ್ರೀಮುರಳಿ ಅವರಿಗಂತೂ ಕಾಶಿ ಯಾತ್ರೆ ಬೇರೆಯದೇ ಫೀಲ್ ಕೊಟ್ಟಿದೆ.
ನಾನು ಕಾಶಿಗೆ ಕಾಲಿಟ್ಟಿದ್ದು ಇದೇ ಮೊದಲು. ಹೀಗಾಗಿ ನನಗಂತೂ ಪ್ರತಿಯೊಂದೂ ವಿಶೇಷ ಅನುಭವ. ಶಿವರಾತ್ರಿಯ ದಿನ ಅಘೋರಿಗಳ ಜೊತೆ ನಟಿಸಿದ್ದು ಮರೆಯಲಾಗದ ಘಟನೆ. ಕಾಶಿಯಲ್ಲಿ ನಾಯಕನ ಬಾಲ್ಯಕ್ಕೆ ಸಂಬಂಧಪಟ್ಟಂತ ದೃಶ್ಯಗಳೂ ಸೇರಿದಂತೆ 15 ದಿನ ಶೂಟಿಂಗ್ ಮಾಡಿದ್ದೇವೆ. ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದೆ. ಯುಗಾದಿಗೆ ಟೀಸರ್ ಕೊಡುತ್ತೇವೆ' ಎನ್ನುತ್ತಾರೆ ಶ್ರೀಮುರಳಿ.
ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಮದಗಜ ಚಿತ್ರಕ್ಕೆ ಅಶಿಕಾ ರಂಗನಾಥ್ ನಾಯಕಿ.