ಕೆಜಿಎಫ್ 2 ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಬಹುತೇಕ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ಹೈದರಾಬಾದ್‍ನಲ್ಲೀಗ ಕ್ಲೈಮಾಕ್ಸ್ ಶೂಟಿಂಗ್ ನಡೆಯುತ್ತಿದ್ದು, ಕ್ಲೈಮಾಕ್ಸ್ ಚಿತ್ರೀಕರಣದಲ್ಲಿ ಭಾರತೀಯ ಸೇನೆ ಬಳಕೆಯಾಗುತ್ತಿದೆ. ಕ್ಲೈಮಾಕ್ಸ್ ಚಿತ್ರೀಕರಣದ ಒಂದು ಫೋಟೋ ಹೊರಬಿದ್ದಿದ್ದು, ನೂರಾರು ಇಂಡಿಯನ್ ಆರ್ಮಿ ವಾಹನಗಳು ಸಾಲಾಗಿ ಸಂಚರಿಸುತ್ತಿರುವ ಫೋಟೋ ಕುತೂಹಲ ಹೆಚ್ಚಿಸಿದೆ.
ಕೆಜಿಎಫ್ ಚಾಪ್ಟರ್ 2ನಲ್ಲಿ ರವೀನಾ ಟಂಡನ್, ದೇಶದ ಪ್ರಧಾನಿಯ ಪಾತ್ರ ಮಾಡುತ್ತಿದ್ದಾರೆ. ಯಶ್ ಅಲಿಯಾಸ್ ರಾಕಿಭಾಯ್ ಡೆತ್ ವಾರೆಂಟ್‍ಗೆ ಸಹಿ ಹಾಕೋದೇ ಅವರು. ನಂತರ ರಾಕಿ ಭಾಯ್ ಸಾಮ್ರಾಜ್ಯಕ್ಕೆ ನುಗ್ಗುತ್ತೆ ಇಂಡಿಯನ್ ಆರ್ಮಿ.
ಹೇಗಿರುತ್ತೆ ಕ್ಲೈಮಾಕ್ಸ್.. ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾವನ್ನು ಥ್ರಿಲ್ ಆಗುವಂತೆ ತೋರಿಸ್ತಾರೆ. ವಿಜಯ್ ಕಿರಗಂದೂರು ಅದರ ಅದ್ಧೂರಿತನಕ್ಕೆ ಮೋಸ ಮಾಡಲ್ಲ. ವೇಯ್ಟ್.. ಸಿನಿಮಾ ಇದೇ ವರ್ಷ ರಿಲೀಸ್ ಆಗುತ್ತೆ