ದರ್ಶನ್ ಅಂದ್ರೆ ಮಾಸ್. ಆದರೆ.. ದರ್ಶನ್ ಈ ಬಾರಿ ಕ್ಲಾಸ್ ಕೆಟಗರಿಯಲ್ಲೂ ಭರ್ಜರಿ ಸೌಂಡು ಮಾಡಿದ್ದಾರೆ. ಬೆಂಗಳೂರಿನಲ್ಲಿ ಮುಕ್ತಾಯಗೊಂಡ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದರ್ಶನ್ ಅವರ 2 ಚಿತ್ರಗಳಿಗೆ ಪ್ರಶಸ್ತಿ ಲಭಿಸಿದೆ.
ಜನಪ್ರಿಯ ಚಿತ್ರಗಳ ಪ್ರಶಸ್ತಿಯಲ್ಲಿ ಮುನಿರತ್ನ ಕುರುಕ್ಷೇತ್ರ ಪ್ರಥಮ ಪ್ರಶಸ್ತಿ ಗೆದ್ದರೆ, ಶೈಲಜಾ ನಾಗ್ ಅವರ ಯಜಮಾನ ಚಿತ್ರಕ್ಕೆ 3ನೇ ಪ್ರಶಸ್ತಿ ಲಭಿಸಿದೆ. 2ನೇ ಸ್ಥಾನ ಜಯತೀರ್ಥ-ರಿಷಬ್ ಶೆಟ್ಟಿ ಕಾಂಬಿನೇಷನ್ನಿನ ಬೆಲ್‍ಬಾಟಂ ಚಿತ್ರಕ್ಕೆ.
ಇನ್ನು ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಪುನೀತ್ ಬ್ಯಾನರ್‍ನ ಕವಲುದಾರಿ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ಹೇಮಂತ್ ರಾವ್ ಖುಷಿ ಖುಷಿಯಾಗಿದ್ದಾರೆ. 2ನೇ ಸ್ಥಾನ ಒಂದು ಶಿಕಾರಿಯ ಕಥೆ ಚಿತ್ರಕ್ಕೆ. 3ನೇ ಅತ್ಯುತ್ತಮ ಚಿತ್ರ ದಯಾಳ್ ಪದ್ಮನಾಭನ್ ಅವರ ರಂಗನಾಯಕಿ ಚಿತ್ರಕ್ಕೆ.
ಸೃಜನ್ ಲೋಕೇಶ್-ಮೇಘನಾ ರಾಜ್ ಅಭಿನಯದ ಇನ್ನೂ ರಿಲೀಸ್ ಆಗಬೇಕಿರುವ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರಕ್ಕೆ ವಿಶೇಷ ತೀರ್ಪುಗಾರರ ಪ್ರಶಸ್ತಿ ಲಭಿಸಿದೆ.