ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರಾಮಾಗಿದ್ದಾರೆ. ಮೈಸೂರಿನಲ್ಲಿದ್ದಾಗ ದಿಢೀರನೆ ಹೊಟ್ಟೆನೋವು ಕಾಣಿಸ್ಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ದರ್ಶನ್, ಸಂಪೂರ್ಣ ಬಾಡಿ ಚೆಕಪ್ ಮಾಡಿಸಿಕೊಂಡಿದ್ದಾರೆ. ಸ್ವಲ್ಪ ಗ್ಯಾಸ್ಟ್ರಿಕ್ ಸಮಸ್ಯೆ ಬಿಟ್ಟರೆ ಬೇರೇನೂ ಪ್ರಾಬ್ಲಂ ಇಲ್ಲ ಅಂತಾ ತಿಳಿಸಿದ್ದಾರೆ ದರ್ಶನ್ ಅವರ ಕ್ಲೋಸ್ ಫ್ರೆಂಡ್ ಸಂದೇಶ್.
ನಟ ದರ್ಶನ್ ಆಸ್ಪತ್ರೆಗೆ ದಾಖಲು - Exclusive
ಆಸ್ಪತ್ರೆಗೆ ಬಂದಿದ್ದ ದರ್ಶನ್ ಅವರಿಗೆ ವೈದ್ಯರು ಕಂಪ್ಲೀಟ್ ಚೆಕಪ್ ಮಾಡಿದ್ದಾರೆ. ಕಿಡ್ನಿ, ಹಾರ್ಟು, ಕಳೆದ ವರ್ಷ ಆಕ್ಸಿಡೆಂಟ್ ಆಗಿ ಗಾಯವಾಗಿದ್ದ ಕೈ ಸೇರಿದಂತೆ ಎಲ್ಲವನ್ನೂ ಚೆಕ್ ಮಾಡಿದ್ದಾರೆ. ನೋ ಸೀರಿಯಸ್. ಎಲ್ಲ ರಿಪೋರ್ಟ್ ನಾರ್ಮಲ್. ಅಭಿಮಾನಿಗಳು ಟೆನ್ಷನ್ ಮಾಡಿಕೊಳ್ಳಬೇಕಾದ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ ಸಂದೇಶ್.