ಹೆಲೆನ್. ಮೂಲತಃ ಮಲಯಾಳಂ ಸಿನಿಮಾ. ಕಳೆದ ವರ್ಷ ರಿಲೀಸ್ ಆಗಿದ್ದ ಹೆಲೆನ್ ಸಂಚಲನ ಮೂಡಿಸಿತ್ತು. ಅನ್ನಾ ಬೆನ್, ಲಾಲ್, ನೋಬಲ್ ಬಾಬು ಮೊದಲಾದವರು ನಟಿಸಿದ್ದ ಚಿತ್ರವದು. ತನಗೇ ಗೊತ್ತಿಲ್ಲದೆ ಫ್ರೀಜರ್ ರೂಂನಲ್ಲಿ ಸಿಲುಕಿಕೊಳ್ಳುವ ನಾಯಕಿ, ಅಲ್ಲಿಂದ ಹೊರಬರಲು ನಡೆಸುವ ಹೋರಾಟ, ಮಗಳು ಎಲ್ಲಿದ್ದಾಳೆಂದು ಗೊತ್ತಿಲ್ಲದೆ ಅವಳಿಗಾಗಿ ಪರಿತಪಿಸುವ ಅಪ್ಪನ ಕಥೆ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಆ ಚಿತ್ರವನ್ನೀಗ ಕನ್ನಡದಲ್ಲಿ ಮಾಡಲು ಹೊರಟಿದ್ದಾರೆ ಮಮ್ಮಿ, ದೇವಕಿ ಚಿತ್ರಗಳ ಖ್ಯಾತಿಯ ಲೋಹಿತ್.
ಹೆಲನ್ ಆಗುತ್ತಿರುವುದು ಲಾಸ್ಯ ನಾಗರಾಜ್. ಕಿಶೋರ್ ರೆಡ್ಡಿ ಎಂಬುವರ ಜೊತೆ ಸೇರಿ ಫ್ರೈಡೇ ಫಿಲಂಸ್ ಹುಟ್ಟುಹಾಕಿರುವ ಲೋಹಿತ್, ನಿರ್ದೇಶನದ ಹೊಣೆಯನ್ನು ತಮ್ಮ ಇಬ್ಬರು ಗೆಳೆಯರಿಗೆ ವಹಿಸಿದ್ದಾರೆ.