ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಹಾಡುಗಳ ಚಿತ್ರೀಕರಣಕ್ಕೆ ಕೊರೋನಾ ವೈರಸ್ ಭೀತಿ ಬ್ರೇಕ್ ಹಾಕಿತ್ತು. ತಂತ್ರಜ್ಞರು ಮತ್ತು ತಂಡದ ಸೇಫ್ಟಿಯೇ ಮುಖ್ಯ ಎಂದಿದ್ದ ದರ್ಶನ್, ವಿದೇಶದ ಚಿತ್ರೀಕರಣಕ್ಕೇ ಬ್ರೇಕ್ ಹಾಕಿದ್ದರು. ಆದರೆ, ಕೊರೋನಾ ಕಾಟ ಅಷ್ಟಕ್ಕೇ ನಿಂತಿಲ್ಲ. ಅದು ಈಗ ಪುನೀತ್ ಚಿತ್ರಕ್ಕೂ ವಿಸ್ತರಿಸಿದೆ.
ಪ್ಲಾನ್ ಪ್ರಕಾರ ಇಷ್ಟೊತ್ತಿಗೆಲ್ಲ ಯುವರತ್ನ ಚಿತ್ರತಂಡ ಆಸ್ಟ್ರಿಯಾ ಮತ್ತು ಸ್ಲೊವೇನಿಯಾದಲ್ಲಿರಬೇಕಿತ್ತು. ಆದರೆ ಎಲ್ಲವನ್ನೂ ಉಲ್ಟಾ ಮಾಡಿದೆ ಕೊರೋನಾ. ಕೊರೋನಾ ವೈರಸ್ ಭೀತಿ ಕೂಲ್ ಆಗುವವರೆಗೆ ಚಿತ್ರೀಕರಣವನ್ನೇ ಮುಂದೂಡಿದೆ ಚಿತ್ರತಂಡ. ನಿರ್ಮಾಪಕ ಕಾರ್ತಿಕ್ ಗೌಡ ಇದನ್ನು ಸ್ಪಷ್ಟಪಡಿಸಿದ್ದಾರೆ.
ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ಸಂತೋಷ್ ಆನಂದ್‍ರಾಮ್ ಮತ್ತು ಪುನೀತ್ ಕಾಂಬಿನೇಷನ್ನಿನಿಂದಾಗಿಯೇ ಭರ್ಜರಿ ಕುತೂಹಲ ನಿರೀಕ್ಷೆ ಹುಟ್ಟಿಸಿರುವ 2020ರ ಬಹುನಿರೀಕ್ಷಿತ ಸಿನಿಮಾ ಯುವರತ್ನ.