ರವಿಶಂಕರ್, ಕನ್ನಡದ ಈಗ ಫುಲ್ ಬೇಡಿಕೆಯಲ್ಲಿರುವ ಖಳನಟ, ಪೋಷಕ ನಟ ಮತ್ತು ಹಾಸ್ಯನಟ. ಒಂದು ಕಾಲದಲ್ಲಿ ಡಬ್ಬಿಂಗ್ ಕಲಾವಿದನಷ್ಟೆ ಆಗಿದ್ದ ರವಿಶಂಕರ್ ಈಗ ತೆಲುಗು ಹಾಗೂ ಕನ್ನಡದಲ್ಲಿ ಡಿಮ್ಯಾಂಡಿನಲ್ಲಿರೋ ಕಲಾವಿದ. ನನಗೆ ಜನ್ಮ ಕೊಟ್ಟಿದ್ದು ಆಂಧ್ರ, ಜೀವನ ಕೊಟ್ಟಿದ್ದು ಕರ್ನಾಟಕ ಎಂದು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಯಾವುದೇ ಮುಜುಗರವಿಲ್ಲದೆ ಹೇಳಿರುವ ರವಿಶಂಕರ್, ತಮ್ಮ ಮಾತೃಭೂಮಿಯಲ್ಲಿಯೂ ಕನ್ನಡಕ್ಕೆ ಪರಾಕ್ ಹೇಳುವುದನ್ನು ಮರೆಯೋದಿಲ್ಲ.
ಇತ್ತೀಚೆಗೆ ತೆಲುಗಿನ ಟಿವಿ ಚಾನೆಲ್ಲೊಂದರಲ್ಲಿ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿತ್ತು. ಆ ವೇಳೆ ತಮಗೆ ಅವಕಾಶ ನೀಡಿದ ಕಿಚ್ಚ ಸುದೀಪ್ ಅವರನ್ನು ನೆನಪಿಸಿಕೊಂಡ ರವಿಶಂಕರ್, ಅದೇ ವೇದಿಕೆಯಲ್ಲಿ ಜೈ ಕನ್ನಡ.. ಜೈ ಭುವನೇಶ್ವರಿ ಎಂದು ಘೋಷಣೆಯನ್ನೂ ಕೂಗಿದರು.
ಸುದೀಪ್ ಕರೆ ಮಾಡಿದ ಆ ದಿನವನ್ನು ನೆನಪಿಸಿಕೊಂಡ ರವಿಶಂಕರ್ ಅವರ ಫೋನ್ ರಿಸೀವ್ ಮಾಡಿದಾಗ ಅವರು ಬೈ ಮಿಸ್ಟೇಕ್, ಅಣ್ಣನಿಗೆ (ಸಾಯಿಕುಮಾರ್) ಕಾಲ್ ಮಾಡೋಕೆ ಹೋಗಿ ನನಗೆ ಮಾಡಿದ್ದಾರೆ ಎಂದುಕೊಂಡಿದ್ದರಂತೆ. ನಂತರ ಕೆಂಪೇಗೌಡ ಚಿತ್ರದಲ್ಲಿ ನಟಿಸಬೇಕು ಎಂದಾಗ ಮೋಸ್ಟ್‍ಲೀ ಪ್ರಕಾಶ್ ರೈ ಅವರ ಲೆಫ್ಟೋ.. ರೈಟೋ.. ಆಗಿ ನಟಿಸಬೇಕು ಎಂದುಕೊಂಡರಂತೆ. ನಂತರ ಪ್ರಕಾಶ್ ರೈ ಪಾತ್ರವನ್ನೇ ನಾನು ಮಾಡ್ತಿರೋದು ಎಂದಾಗ ಭಯದಲ್ಲೇ ಒಪ್ಪಿಕೊಂಡೆ. ಆಗ ಸುದೀಪ್ ಕೊಟ್ಟ ಪ್ರೋತ್ಸಾಹವೇ ಆ ಅಭಿನಯ ಬರೋಕೆ ಕಾರಣ. ನಂತರ ಎಲ್ಲರೂ ನನ್ನನ್ನು ಆರ್ಮುಗ ಎಂದೇ ಕರೆಯಲಾರಂಭಿಸಿದರು ಎಂದು ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ ರವಿಶಂಕರ್.