ವಿಕ್ರಾಂತ್ ರೋಣ. ಇವನು ಆರಡಿ ಕಟೌಟು. ಗಡ್ಡವಿದ್ದರೆ ಚೆಂದ ಚೆಂದ. ನಗುವಿದ್ದರೆ ಇನ್ನೂ ಚೆಂದ. ಚಿತ್ರರಂಗಕ್ಕೆ ಬಂದ ಕೆಲವೇ ದಿನಗಳಲ್ಲಿ ಕನ್ನಡಗರಿಂದ ಕಿಚ್ಚ ಎಂದೇ ಕರೆಸಿಕೊಂಡ ಸುದೀಪ್, ಈಗ ವಿಕ್ರಾಂತ್ ರೋಣ ಆಗುತ್ತಿದ್ದಾರೆ.
ಯೆಸ್, ಇದು ಫ್ಯಾಂಟಮ್ ಚಿತ್ರದಲ್ಲಿ ಸುದೀಪ್ ನಟಿಸುತ್ತಿರುವ ಪಾತ್ರದ ಹೆಸರು. ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶಾಲಿನಿ ಮಂಜುನಾಥ್ ಮತ್ತು ಜಾಕ್ ಮಂಜು ನಿರ್ಮಾಪಕರು.
ಚಿತ್ರದ ಕಥೆಯ ಬಹುಭಾಗದ ಚಿತ್ರೀಕರಣ ಸೆಟ್‍ಗಳಲ್ಲಿ ನಡೆಯಲಿದೆ. ಶೇ.20ರಷ್ಟು ಮಾತ್ರವೇ ಹೊರಾಂಗಣ ಚಿತ್ರೀಕರಣ. ಚಿತ್ರದಲ್ಲಿ ಸುದೀಪ್ ಇರೋದ್ರಿಂದ ಹಲವು ಭಾಷೆಗಳಲ್ಲಿ ಸಿನಿಮಾ ಬರೋದು ಪಕ್ಕಾ ಎಂದಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ.