ಜಾಕಿ ಚಾನ್, ಚೀನಾದ ನಟನೇ ಆದರೂ ಜಗತ್ತಿನಲ್ಲೆಲ್ಲ ಫೇಮಸ್ಸು. ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರೋ ನಟ ಜಾಕಿ ಚಾನ್ ಕೊರೋನಾ ವೈರಸ್ ಬಂದು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಇದ್ದಕ್ಕಿದ್ದಂತೆ ಹಬ್ಬಿತ್ತು. ಚೀನಾದಲ್ಲಿ ಕೊರೋನಾ ಸೃಷ್ಟಿಸಿರುವ ಸಾವಿನ ಸರಣಿ ಎಲ್ಲರಿಗೂ ಗೊತ್ತಿರುವಂಥದ್ದೇ. ಈಗಾಗಲೇ 2 ಸಾವಿರಕ್ಕೂ ಹೆಚ್ಚು ಮಂದಿ ಚೀನಾದಲ್ಲೇ ಸಾವನ್ನಪ್ಪಿದ್ದಾರೆ. ಹೀಗಾಗಿಯೇ ಜಾಕಿ ಚಾನ್ ಅವರಿಗೂ ವೈರಸ್ ಸೋಂಕು ತಗುಲಿ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹಬ್ಬಿದ್ದವು. ಕೆಲವರಂತೂ ಜಾಕಿ ಚಾನ್ ಅವರಿಗೆ ಮಾಸ್ಕ್‍ಗಳನ್ನು ಕಳಿಸಿಕೊಟ್ಟಿದ್ದರು.
ಇದಕ್ಕೆಲ್ಲ ಪ್ರತಿಕ್ರಿಯೆ ನೀಡಿರುವ ಜಾಕಿ ಚಾನ್, ನಾನು ಹೆಲ್ದಿಯಾಗಿದ್ದೇನೆ. ಸೇಫ್ ಆಗಿದ್ದೇನೆ. ನಾನು ಕೊರೋನಾ ವೈರಸ್ ಶಿಬಿರದಲ್ಲಿ ಇಲ್ಲ. ನನ್ನ ಆರೋಗ್ಯದ ಬಗ್ಗೆ ಕಳಕಳಿ ವ್ಯಕ್ತಪಡಿಸಿ ಹಲವರು ನನಗೆ ಮೆಸೇಜ್ ಕಳಿಸಿದ್ದಾರೆ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಹೃದಯ ತುಂಬಿ ಬಂದಿದೆ ಎಂದಿದ್ದಾರೆ ಜಾಕಿ ಚಾನ್.