ಸಿಂಪಲ್ ಸುನಿ, ಗೋಲ್ಡನ್ ಸ್ಟಾರ್ ಕಾಂಬಿನೇಷನ್‍ನ ಸಕ್ಕತ್ ಚಿತ್ರ ಪೋಸ್ಟರ್ ಹೊರಬಿದ್ದಿದ್ದೇ ತಡ.. ಎಲ್ಲರಲ್ಲೂ ಒಂದು ಪ್ರಶ್ನೆ ಮನೆ ಮಾಡಿದೆ. ಕುತೂಹಲ ಹುಟ್ಟಿಸಿದೆ. ಆ ಕುತೂಹಲದ ಕೇಂದ್ರ ಬಿಂದುವಾಗಿರೋದು ಸದ್ಯಕ್ಕೆ ಕಿರುತೆರೆ ಸೆನ್ಸೇಷನ್ ಜವಾರಿ ಹನುಮ.
ಹಾವೇರಿ ಮೂಲದ ಜವಾರಿ ಹನುಮಮಂತ ಕಿರುತೆರೆಗೆ ಪರಿಚಯವಾಗಿದ್ದು ಝೀ ಸರಿಗಮಪ ಮೂಲಕ. ಅದೇನೋ ಎಂತೋ.. ಕಿರುತೆರೆಯಲ್ಲಿ ಕ್ರಾಂತಿಯನ್ನೇ ಮಾಡಿಬಿಟ್ಟ ಹನುಮಂತ. ಇವತ್ತಿಗೂ ಹನುಮಂತನ ಹಾಡುಗಳಿಗೆ ಕಿರುತೆರೆಯಲ್ಲಿ ಒಳ್ಳೆಯ ಟಿಆರ್‍ಪಿ ಇದೆ.
ಈಗ ಗಣೇಶ್ ಲುಕ್ ಹೊರಬಿತ್ತಲ್ಲ.. ಅಲ್ಲಿ ಎಲ್ಲರಿಗೂ ಈ ಪ್ರಶ್ನೆ ಮೂಡೋಕೆ ಕಾರಣವಾಗಿದ್ದು ಲುಂಗಿ. ಗಣೇಶ್ ಧರಿಸಿರೋ ಲುಂಗಿ, ಹಾಡುತ್ತಿರುವ ಸ್ಟೈಲು ಎಲ್ಲವೂ ಹನುಮನನ್ನೇ ನೆನಪಿಸಿದೆ. ಹಾಗಾದರೆ.. ಇದು ಆ ಕಥೆನಾ..?
ಸಿಂಪಲ್ ಸುನಿ ಸಿಂಪಲ್ಲಾಗ್ ಕೇಳಿದ್ರೂ.. ಸೀರಿಯಸ್ಸಾಗ್ ಕೇಳಿದ್ರೂ.. ಏನೂ ಹೇಳಲ್ಲ.