` ಅರ್ಜುನ್ ಜನ್ಯ ಈಗ ಹೇಗಿದ್ದಾರೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
arjun jany's health report
Arjun Janya

ಅನಿರೀಕ್ಷಿತವಾಗಿ ಹೃದಯಾಘಾತಕ್ಕೊಳಗಾಗಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರಿಗೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪುಟ್ಟದೊಂದು ಆಪರೇಷನ್ ಮಾಡಿದ್ದಾರೆ. ಆಂಜಿಯೋಪ್ಲಾಸ್ಟಿ ಮಾಡಿ ಸ್ಟಂಟ್ ಅಳವಡಿಸಿದ್ದಾರೆ. ಐಸಿಯುನಿಂದ ಶಿಫ್ಟ್ ಮಾಡಲಾಗಿದ್ದು, ಸದ್ಯಕ್ಕೆ ಅರ್ಜುನ್ ಜನ್ಯಾ ಕಂಪ್ಲೀಟ್ ಬೆಡ್ ರೆಸ್ಟ್‍ನಲ್ಲಿದ್ದಾರೆ.

ಹೃದಯಾಘಾತಕ್ಕೆ ಅರ್ಜುನ್ ಜನ್ಯಾ ಅವರ ಜೀವನ ಶೈಲಿಯೇ ಕಾರಣ. ಅವರು ಅದನ್ನು ಬದಲಿಸಿಕೊಳ್ಳಬೇಕಿದೆ ಎಂದಿದ್ದಾರೆ ಡಾಕ್ಟರ್ಸ್. ಅರ್ಜುನ್ ಜನ್ಯಾ ಅವರ ಹೃದಯ 99% ಬ್ಲಾಕ್ ಆಗಿತ್ತು. ಅದನ್ನು ಇಂಪೆಂಡಿಂಗ್ ಹಾರ್ಟ್ ಅಟ್ಯಾಕ್ ಎನ್ನುತ್ತಾರೆ. ಇನ್ನೇನು ಸ್ವಲ್ಪ ತಡವಾಗಿದ್ದರೆ ಅಪಾಯದ ಎಲ್ಲ ಸಾಧ್ಯತೆಗಳೂ ಇದ್ದವು ಎಂದಿದ್ದಾರೆ ವೈದ್ಯರು. ದೇವರು ದೊಡ್ಡವನು. ಅರ್ಜುನ್ ಜನ್ಯಾ ಅವರು ಈಗ ಆರೋಗ್ಯವಾಗಿದ್ದಾರೆ.

Shivarjun Movie Gallery

KFCC 75Years Celebrations and Logo Launch Gallery