ಮಯ್ಥಾಯ್ ಕಲೆ ಹೆಸರು ಕೇಳಿದ್ದೀರಾ..? ಅದು ಥೈಲ್ಯಾಂಡ್ನ ಸಮರ ಕಲೆ. ಜಗತ್ತಿನ ಕೆಲವೇ ಕೆಲವು ದೇಶಗಳಲ್ಲಿ ಆ ಆಟ ಆಡ್ತಾರೆ. ಅಪಾಯಕಾರಿ ಕ್ರೀಡೆಯೂ ಹೌದು. ಅಖಾಡದಲ್ಲೇ ಕ್ರೀಡಾಪಟುಗಳು ಜೀವಕ್ಕೆ ಅಪಾಯ ತಂದುಕೊಂಡಿರೋ ಘಟನೆಗಳೂ ನಡೆದಿವೆ. ಅಂಥಾದ್ದರಲ್ಲಿ ಅಂತಾದ್ದೊಂದು ಅದ್ಭುತ ಸಾಹಸ ಕ್ರೀಡೆಯಲ್ಲಿ ಕನ್ನಡಿಗನೊಬ್ಬ ಅದ್ಭುತ ಸಾಹಸ ಮೆರೆದಿದ್ದಾನೆ. ಸೂರ್ಯ ಸಾಗರ್ ಥಾಯ್ಲ್ಯಾಂಡ್ನ ಮಯ್ಥಾಯ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಅಂದಹಾಗೆ ಸೂರ್ಯ ಸಾಗರ್ ಈ ಚಾಂಪಿಯನ್ ಶಿಪ್ ಗೆಲ್ಲುತ್ತಿರುವುದು ಇದು 2ನೇ ಬಾರಿ. ಫೆಬ್ರವರಿ 16ರಂದು ರೋಬೋಕಾಪ್ ವಿರುದ್ಧದದ ಪಂದ್ಯದಲ್ಲಿ ಗೆದ್ದು ಸಾಧನೆ ಮೆರೆದಿದ್ದಾರೆ.
ಮಗನ ಈ ಸಾಧನೆಯನ್ನು ಕನ್ನಡದ ಖ್ಯಾತ ಕಲಾವಿದ, ನಟ, ನಿರ್ದೇಶಕ, ಆರ್ಟ್ ಡೈರೆಕ್ಟರ್ ಅರುಣ್ ಸಾಗರ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸೂರ್ಯ ಸಾಗರ್ಗೆ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆಯಿದ್ದು, ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.