` ಶಿವಾಜಿ ಫುಲ್ ಹ್ಯಾಪಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ramesh aravind ha[[y over shivaji suratkal's success
Ramesh Aravind

ಶಿವಾಜಿ ಸುರತ್ಕಲ್ ಗೆದ್ದಿದೆ. ಇದು ರಮೇಶ್ ಅರವಿಂದ್ ಅವರಿಗೆ ಸಖತ್ ಖುಷಿ ಕೊಟ್ಟಿದೆ. ರಮೇಶ್ ಅರವಿಂದ್ ಅದನ್ನು ತಮ್ಮದೇ ಸ್ಟೈಲ್‍ನಲ್ಲಿ ಬಣ್ಣಿಸಿರೋದು ಹೀಗೆ.. `ನಾವು ಇಷ್ಟಪಟ್ಟ ಕೆಲಸವನ್ನು, ನಾವು ಇಷ್ಟಪಡುವ ಜನರ ಜೊತೆ, ಇಷ್ಟಪಡುವ ಜಾಗದಲ್ಲಿ, ಇಷ್ಟಪಟ್ಟು ಮಾಡುವುದೇ ಯಶಸ್ಸು. ನಾವು ಇಷ್ಟಪಟ್ಟು ಮಾಡಿದ ಕೆಲಸವನ್ನು ಜನರೂ ಇಷ್ಟಪಟ್ಟರೆ.. ಅದು ಅತಿ ದೊಡ್ಡ ಯಶಸ್ಸು'.

ಥಿಯೇಟರುಗಳಿಗೆ ಭೇಟಿ ಕೊಟ್ಟಾಗ ಪ್ರೇಕ್ಷಕರು ನೀಡಿರುವ ಪ್ರತಿಕ್ರಿಯೆ, ಟಿಕ್‍ಟಾಕ್‍ನಲ್ಲಿ ಬರುತ್ತಿರುವ ರಿಯಾಕ್ಷನ್ಸ್ ಹಾಗೂ ರಾಹುಲ್ ದ್ರಾವಿಡ್ ಸಿನಿಮಾ ನೋಡಿ ಮೆಚ್ಚಿದ್ದು ಖುಷಿ ಕೊಟ್ಟಿದೆ ಎನ್ನುತ್ತಾರೆ ರಮೇಶ್.

ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗಂತೂ ಚಿತ್ರದ ರೀಮೇಕ್‍ಗೆ ಬರುತ್ತಿರುವ ಡಿಮ್ಯಾಂಡ್ ನೋಡಿಯೇ ಖುಷಿಯಾಗಿದೆ. ಬಾಲಿವುಡ್, ತಮಿಳು ಹಾಗೂ ತೆಲುಗಿನಲ್ಲಿ ಡಿಮ್ಯಾಂಡ್ ಇದೆ ಎಂದಿದ್ದಾರೆ ಶ್ರೀವತ್ಸ. ನಿರ್ಮಾಪಕ ಅನೂಪ್ ಗೌಡ ನಿಮ್ಮ ಸಹಕಾರ ಹೀಗೆಯೇ ಇರಲಿ ಎಂದು ಮನವಿ ಮಾಡಿದ್ದಾರೆ.

Shivarjun Movie Gallery

KFCC 75Years Celebrations and Logo Launch Gallery