` ಪ್ರಕಾಶ್ ರೈ, ರಜನಿಕಾಂತ್, ಉಪೇಂದ್ರಗೆ ಮಿಸ್ಸಾಗಿದ್ದ ಮುದ್ದಣ್ಣ.. ಪ್ರಭಾಕರನಿಗೆ ಒಲಿದ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bicchugathi dalayavi muddanna
Bicchugathi Movie Image

ದಳವಾಯಿ ಮುದ್ದಣ, ಕನ್ನಡ ಚಿತ್ರರಂಗದಲ್ಲಿ ಪದೇ ಪದೇ ಪ್ರಸ್ತಾಪವಾಗುತ್ತಿದ್ದ ಐತಿಹಾಸಿಕ ಪಾತ್ರದ ಹೆಸರು. ಆತ ದುರ್ಗದ ಪಾಳೆಯಗಾರರಲ್ಲೇ ಪರಮ ಕ್ರೂರಿ ನಾಯಕ. ಆ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಹಲವರು ಚಿತ್ರ ನಿರ್ಮಿಸುವ ಯೋಜನೆ ರೂಪಿಸಿದ್ದರು. ಅಂತಹವರಲ್ಲಿ ಪ್ರಮುಖರು ಟಿ.ಎಸ್.ನಾಗಾಭರಣ.

ನಾಗಮಂಡಲದ ಹೊತ್ತಲ್ಲಿ ಅದು ಪ್ರಕಾಶ್ ರೈ ಬಳಿಗೆ ಹೋಗಿತ್ತು. ಒಂದಷ್ಟು ತೆರೆಮರೆಯ ಕೆಲಸಗಳೂ ಆಗಿ ಅದೇಕೋ ಪ್ರಾಜೆಕ್ಟ್ ಅರ್ಧಕ್ಕೇ ನಿಂತುಬಿಟ್ಟಿತ್ತು. ಅದಾದ ಮೇಲೆ ಆ ಪಾತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ರಿಯಲ್ ಸ್ಟಾರ್ ಉಪೇಂದ್ರ ಹೆಸರೂ ಕೇಳಿಬಂತು. ಈಗ ಅವರೆಲ್ಲರ ಆಸೆ ಆಸೆಯಾಗಿಯೇ ಉಳಿದುಹೋಯ್ತು.

ಅಂತಹ ಘಟಾನುಘಟಿ ಸ್ಟಾರ್ಗಳ ಕೈ ತಪ್ಪಿದ್ದ ದಳವಾಯಿ ಮುದ್ದಣ್ಣನ ಪಾತ್ರ ಕಾಲಕೇಯ ಪ್ರಭಾಕರ್ ಪಾಲಾಗಿದ್ದೇ ವಿಶೇಷ. ಬಿಚ್ಚುಗತ್ತಿ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದ್ದು, ಬಿಚ್ಚುಗತ್ತಿ ಭರಮಣ್ಣನಾಗಿ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಕಾಣಿಸಿಕೊಂಡಿದ್ದಾರೆ. ಇದುವರೆಗೆ ಕಮರ್ಷಿಯಲ್ ಚಿತ್ರಗಳನ್ನೇ ನಿರ್ದೇಶಿಸಿದ್ದ ಹರಿ ಸಂತೋಷ್, ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರ ಮಾಡಿದ್ದಾರೆ. ಹರಿಪ್ರಿಯಾ ಸಿದ್ದಾಂಬೆಯಾಗಿ ಕಂಗೊಳಿಸಿದ್ದಾರೆ. ಇಡೀ ಚಿತ್ರ ತಂಡಕ್ಕೆ ಬೆಂಬಲವಾಗಿ ನಿಂತಿರೋ ಹಂಸಲೇಖ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಓಂ ಸಾಯಿ ಪ್ರೊಡಕ್ಷನ್ಸ್ ಚಿತ್ರವನ್ನು ನಿರ್ಮಾಣ ಮಾಡಿದೆ.

Shivarjun Movie Gallery

KFCC 75Years Celebrations and Logo Launch Gallery