` ಸ್ಟೀವನ್ ಸ್ಪಿಲ್ ಬರ್ಗ್ ಮಗಳು ಪೋರ್ನ್ ಸ್ಟಾರ್ ಆಗ್ತಾಳಂತೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
steven spelberg shocked and concerned over his daughter's pornstar career

ಸ್ಟೀವನ್ ಸ್ಪಿಲ್ ಬರ್ಗ್ ಹಾಲಿವುಡ್‍ನ್ನೂ ಮೀರಿ ಬೆಳೆದಿರುವ ಜಗದ್ವಿಖ್ಯಾತ ನಿರ್ದೇಶಕ. ಜಗತ್ತಿಗೇ ಸಿನಿಮಾ ಪಾಠ ಮಾಡುವ ಹಾಲಿವುಡ್‍ನಲ್ಲಿ ಟ್ರೆಂಡ್ ಸೆಟ್ಟರ್ ನಿರ್ದೇಶಕ. 1968ರಲ್ಲಿ ಶುರುವಾದ ಸ್ಪಿಲ್‍ಬರ್ಗ್ ಸಕ್ಸಸ್ ಜರ್ನಿ, 2020ರಲ್ಲೂ ನಿರಂತರವಾಗಿ ನಡೆಯುತ್ತಲೇ ಇದೆ. ಡ್ಯುಯೆಲ್, ಜಾಸ್, ದಿ ಕಲರ್ ಪರ್ಪಲ್, ಎಂಪೈರ್ ಆಫ್ ದಿ ಸನ್, ಹುಕ್ ಚಿತ್ರಗಳದ್ದೇ ಒಂದು ಟ್ರೆಂಡ್ ಆದರೆ, ಜುರಾಸಿಕ್ ಪಾರ್ಕ್, ದಿ ಲಾಸ್ಟ್ ವಲ್ರ್ಡ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮ್ಯುನಿಚ್ ಚಿತ್ರಗಳ ಟ್ರೆಂಡೇ ಬೇರೆ. ಇಂತಹ ನಿರ್ದೇಶಕನಿಗೆ ಈಗ ತಲೆನೋವಾಗಿರೋದು ಆತನ ಮಗಳು.

73 ವರ್ಷದ ಸ್ಪಿಲ್ ಬರ್ಗ್ ಅವರಿಗೆ 23 ವರ್ಷದ ಮಗಳಿದ್ದಾಳೆ. ಮೆಕೇಲಾ ಸ್ಪಿಲ್ ಬರ್ಗ್ ಎಂಬುದು ಆಕೆಯ ಹೆಸರು. ಸುಂದರಿ. ಸ್ಪಿಲ್‍ಬರ್ಗ್ ಅವರ ದತ್ತು ಪುತ್ರಿ. ಈಕೆ ಈಗ ನೀಲಿ ಚಿತ್ರಗಳಲ್ಲಿ ನಟಿಸುವ  ಆಸೆ ವ್ಯಕ್ತಪಡಿಸಿದ್ದಾಳೆ. ಪೋರ್ನ್ ಚಿತ್ರಗಳಲ್ಲಿ ನಟಿಸಿ ಹಣ ಮತ್ತು ಖ್ಯಾತಿ ಸಂಪಾದಿಸುವುದು ಮೆಕೇಲಾ ಗುರಿ. ಮಗಳ ಆಸೆ ಕೇಳಿ ಶಾಕ್ ಆಗಿರುವುದು ಸ್ಟೀವನ್ ಸ್ಪಿಲ್‍ಬರ್ಗ್.

ಎರಡು ಬಾರಿ ಆಸ್ಕರ್ ಪಡೆದಿರುವ ಸ್ಪಿಲ್‍ಬರ್ಗ್ ಅವರ ಇನ್ನಿಬ್ಬರು ಹೆಣ್ಣು ಮಕ್ಕಳಾದ ಸಾಶಾ ಮತ್ತು ಜೆಸ್ಸಿಕಾ ಈಗಾಗಲೇ ಹಾಲಿವುಡ್‍ನಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಆದರೆ ಈ ಚಿಕ್ಕ ಮಗಳ ಪೋರ್ನ್ ಸಿನಿಮಾ ಲವ್ ಅಪ್ಪನ ನಿದ್ದೆಗೆಡಿಸಿದೆ.

Shivarjun Movie Gallery

KFCC 75Years Celebrations and Logo Launch Gallery