ಕಿಸ್ ಸಕ್ಸಸ್ ಆದ ನಂತರ ಎ.ಪಿ.ಅರ್ಜುನ್ ಅದ್ಧೂರಿ ಲವರ್ಸ್ ಚಿತ್ರ ಮಾಡೋದಾಗಿ ಘೋಷಿಸಿದ್ದರು. ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದರು. ಕಿಸ್ ಚಿತ್ರದ ಶತದಿನೋತ್ಸವ ಕಾರ್ಯಕ್ರಮದಲ್ಲಿಯೇ ಘೋಷಿಸಲ್ಪಟ್ಟಿದ್ದ ಅದ್ಧೂರಿ ಲವರ್ಸ್ ಹೀರೋ, ಹೀರೋಯಿನ್ ಯಾರು ಎಂಬುದು ಗುಟ್ಟಾಗಿಯೇ ಇತ್ತು. ಅದನ್ನೀಗ ಹೊರಬಿಟ್ಟಿದ್ದಾರೆ ಎ.ಪಿ.ಅರ್ಜುನ್.
ಎ.ಪಿ.ಅರ್ಜುನ್ ಅವರ ಹೊಸ ಚಿತ್ರದಲ್ಲಿ ಅದ್ಧೂರಿಯಾಗಿ ಲವ್ ಮಾಡೋಕೆ ಕಿಸ್ ಖ್ಯಾತಿಯ ವಿರಾಟ್ ರೆಡಿ. ಅವರಿಗೆ ಜೊತೆಯಾಗೋಕೆ ಇತ್ತ ಸಂಜನಾ ಆನಂದ್ ರೆಡಿಯಾಗಿದ್ದಾರೆ. ಈ ಚಿತ್ರ ಹೇಗಿರುತ್ತೆ ಅಂದ್ರೆ ಹಿಂಗೂ.. ಈ ಲೆವೆಲ್ಲಿಗೂ ಲವ್ ಮಾಡ್ತಾರಾ..? ಇದು ಸಾಧ್ಯಾನಾ.. ಎಂದು ಬೆರಗು ಹುಟ್ಟಿಸುವಂತಾ ಕಥೆ ಚಿತ್ರದಲ್ಲಿದೆ ಅಂತಾರೆ ಅರ್ಜುನ್. ಗೆಟ್ ರೆಡಿ ಟು ಒನ್ ಮೋರ್ ಲವ್ ಸ್ಟೋರಿ.