ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕು ಎಲ್ಲೆಡೆ ಸದ್ದು ಮಾಡುತ್ತಿದೆ. ನಟರಾಕ್ಷಸ ಎಂಬ ಬಿರುದಿಗೆ ತಕ್ಕಂತೆ ಅಬ್ಬರಿಸಿದ್ದಾರೆ ಧನಂಜಯ್. ಆ ನಟರಾಕ್ಷಸನಿಗೇ ರಾಕ್ಷಸನಂತೆ ಕಾಡ್ತಿರೋದು ಟೆಲಿಗ್ರಾಂ. ಹೌದು, ಚಿತ್ರದ ಪೈರಸಿ ಪ್ರತಿಗಳು ಟೆಲಿಗ್ರಾಂನಲ್ಲಿ ರಿಲೀಸ್ ಆಗಿವೆ.
ಟೆಲಿಗ್ರಾಂ ಅನ್ನೋದು ಕೇವಲ ಕನ್ನಡ ಸಿನಿಮಾಗಳನ್ನಷ್ಟೇ ಅಲ್ಲ, ಎಲ್ಲ ಭಾಷೆಯ ಚಿತ್ರಗಳಿಗೂ ಮಾರಕವಾಗಿ ಕಾಡುತ್ತಿದೆ. ರಿಲೀಸ್ ಆದ ಕೆಲವೇ ದಿನಗಳಲ್ಲಿ ಟೆಲಿಗ್ರಾಂನಲ್ಲಿ ವಿಡಿಯೋ ಪ್ರತ್ಯಕ್ಷವಾಗುತ್ತದೆ. ತಮಿಳು ರಾಕರ್ಸ್‍ಗಿಂತ ದೊಡ್ಡ ನೆಟ್‍ವರ್ಕ್ ಇದು.
ಇದು ಬೇರೆ ಸೈಟ್‍ಗಳಿಗೆ ಹೋಲಿಸಿದರೆ ತುಂಬಾ ಅಪ್‍ಡೇಟೆಡ್ & ಸೆಕ್ಯೂರ್. ಆದರೆ ಅದನ್ನೇ ಪೈರಸಿ ಕ್ರಿಮಿನಲ್ಸ್ ಬಳಸಿಕೊಳ್ತಿರೋದು ಶಾಕ್ ಕೊಟ್ಟಿದೆ.
ಈ ಪೈರಸಿಗೆ ಧನಂಜಯ್ ವ್ಯಂಗ್ಯ, ಆಕ್ರೋಶ, ಅಸಹಾಯಕತೆಯಿಂದಲೇ ಕೌಂಟರ್ ಕೊಟ್ಟಿದ್ದಾರೆ. ಎಷ್ಟು ಕಷ್ಟಪಟ್ಟು ಸಿನಿಮಾ ಮಾಡಿದ್ರೂ.. ಎಂಥ ಪಾತ್ರಗಳನ್ನು ಜೀವಿಸಿದರು.. ಅದ್ಭುತ.. ಅಮೋಘ.. ಜೈ ಕರ್ನಾಟಕ ಮಾತೆ.. ನಿಮ್ಮಂತಹವರು ಬೇಕು. ಇಲ್ಲ ಅಂದ್ರೆ ಲೈಫ್ ಬೇಗ ಬೋರ್ ಆಗ್ಬಿಡುತ್ತೆ. ಇದರ ಮಧ್ಯೆ ಹೌಸ್‍ಫುಲ್ ಪ್ರದರ್ಶನ ಕೊಡ್ತಾ ಇರೋದು ನಿಜ. ಸಿನಿಮಾ ಪ್ರೇಮಿಗಳಿಗೆ ಕೃತಜ್ಞತೆ. ಯಾರೂ.. ಯಾರ ಓಟಾನೂ ನಿಲ್ಸೋಕಾಗಲ್ಲ ಎಂದಿದ್ದಾರೆ ಧನಂಜಯ್.