ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಗೆದ್ದುಬಿಟ್ಟಿದೆ. ಇದು ಸೂರಿಗಿಂತಲೂ ಹೆಚ್ಚಾಗಿ ಡಾಲಿ ಧನಂಜಯ್ ಕಾಯುತ್ತಿದ್ದ ಗೆಲುವು. ಹೀರೋ ಆಗಿ ನಟಿಸಿದ್ದ ಚಿತ್ರದ ಗೆಲುವು ಧನಂಜಯ್‍ಗೆ ತುಂಬಾ ತಡವಾಗಿ ಸಿಕ್ಕಿದೆ. ಮೊದಲ ದಿನ ಎರಡೂವರೆ ಕೋಟಿ ಕಲೆಕ್ಷನ್ ಮಾಡಿದ್ದ ಸಿನಿಮಾ ವೀಕೆಂಡ್‍ನಲ್ಲಿ 5 ಕೋಟಿ ಕಲೆಕ್ಷನ್ ದಾಟಿದೆ. ಇದು ಧನಂಜಯ್ ಅವರಿಗೆ ಸಿಕ್ಕ ಬಾಕ್ಸಾಫೀಸ್ ಗೆಲುವು.
ಇನ್ನು ಚಿತ್ರತಂಡ ಹೋದೆಡೆಯಲ್ಲೆಲ್ಲ ಅಭಿಮಾನಿಗಳ ಜೈಕಾರದ ಸ್ವಾಗತ ಸಿಕ್ಕಿದೆ. ಮಂಡ್ಯದಲ್ಲಂತೂ ಅಭಿಮಾನಿಗಳು ಬಾಳೆಹಣ್ಣಿನ ಗೊನೆಯನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಬಾಳೆಹಣ್ಣಿನ ಗೊನೆ ಯಾಕೆ..? ಅದನ್ನು ನೀವು ಚಿತ್ರದಲ್ಲೇ ನೋಡಬೇಕು. ಮಂಕಿ ಟೈಗರ್ ಚಿತ್ರದಲ್ಲಿ ಬಾಳೆಹಣ್ಣಿನ ಸೀನ್ ಫೇಮಸ್ ಆಗಿದೆ.
ಇನ್ನು ಚಿತ್ರದಲ್ಲಿ ಫೇಮಸ್ ಆಗಿರುವುದು ಪಾತ್ರಗಳ ಹೆಸರು. ಮಂಕಿ ಸೀನ, ಮೂಗ, ಗಲೀಜು, ಬೀರ್ ರಾಣಿ, ರೇಜರ್ ಗೋಪಿ, ಪಾಪ್‍ಕಾರ್ನ್ ದೇವಿ, ಬಬ್ಲೂ, ಹಾವ್‍ರಾಣಿ, ಕಲಾಯ್, ಕೋತಿಮರಿ, ಶುಗರ್, ಸುಕ್ಕಾ, ಭದ್ರಾವತಿ ಕುಷ್ಕಾ, ಕಪ್ಪೆ....