` ಮೊಬೈಲ್‌ ಬಿಡಿ, ಗಿಡ ನೆಡಿ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿಯ ಗಡಿಬಿಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
selfie mummy google daddy begins
Selfie Mummy Google Daddy Movie Image

ಮೇಘನಾ ರಾಜ್‌ ಹಾಗೂ ಸೃಜನ್‌ ಲೋಕೇಶ್‌ ಅಭಿನಯದ ಹೊಸ ಸಿನಿಮಾ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ. ಅವರೀಗ ಮೊಬೈಲ್‌ ಬಿಡಿ, ಗಿಡ ನೆಡಿ ಘೋಷಣೆಯೊಂದಿಗೆ ಚಿತ್ರದ ಕೆಲಸ ಶುರು ಮಾಡಿದ್ದಾರೆ. ಇದು ಚಿತ್ರದ ಸಂದೇಶವೂ ಹೌದು.

ಮಧುಚಂದ್ರ ನಿರ್ದೇಶನದ ಚಿತ್ರದಲ್ಲಿ ಮೊಬೈಲ್‌ ವ್ಯಸನದ ಕಥೆ ಇದೆ. ಮಕ್ಕಳ ಕಥೆ ಕೇಳಲೇಬೇಡಿ ಅನ್ನೋದು ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿಯ ಟ್ಯಾಗ್ಲೈನ್. ಸಿನಿಮಾದಲ್ಲಿ ಹೀರೊ ಹೀರೋಯಿನ್‌ ಇಬ್ಬರೂ ಮೊಬೈಲು, ಗೂಗಲ್ಲಿನ ವ್ಯಸನಕ್ಕೆ ಬಿದ್ದವರು. ಅವರಿಬ್ಬರ ಗೀಳಿನ ನಡುವೆ ಮಕ್ಕಳ ಕಥೆ ಏನಾಗಬಹುದು ಅನ್ನೋದೇ ಚಿತ್ರದ ಕಥೆ.

ಈ ಚಿತ್ರಕ್ಕೆ 40 ಮಂದಿ ಬಂಡವಾಳ ಹೂಡಿದ್ದಾರೆ. ನಿರ್ದೇಶಕ ಮಧುಚಂದ್ರ ಅವರಿಗೆ ಇದು 4ನೇ ಸಿನಿಮಾ. ಸೃಜನ್ ಗೂಗಲ್ ಡ್ಯಾಡಿಯಾದರೆ, ಮೇಘನಾ ಸೆಲ್ಫಿ ಮಮ್ಮಿ.

Shivarjun Movie Gallery

KFCC 75Years Celebrations and Logo Launch Gallery