` ಬಾಲಿವುಡ್ಡಲ್ಲಿ ರಾಕಿಭಾಯ್ ಹವಾ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yash sensation in bollywood
Yash Image

ರಾಕಿಂಗ್ ಸ್ಟಾರ್ ಯಶ್ ಹವಾ ಈಗ ಸ್ಯಾಂಡಲ್‍ವುಡ್ ಗಡಿ ದಾಟಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಜೋರಾಗಿ ಬೀಸ್ತಾ ಇದೆ. ಆ ಹವಾ ಎಷ್ಟರಮಟ್ಟಿಗೆ ಇದೆ ಅಂದ್ರೆ, ಈಗ ಬಾಲಿವುಡ್‍ನಲ್ಲಿ ಯಶ್ ಅವರದ್ದೇ ಹವಾ. ಅದೂ ಬಾಲಿವುಡ್ ಟಾಪ್ ಸ್ಟಾರ್‍ಗಳಿಗೆ ಟಕ್ಕರ್ ಕೊಡುವ ಹಂತಕ್ಕೆ ಹೋಗಿದೆ.

ಇತ್ತೀಚೆಗೆ ಬಾಲಿವುಡ್‍ನಲ್ಲಿ ಓರ್ ಮ್ಯಾಕ್ಸ್ ಮೀಡಿಯಾ ಒಂದು ಸರ್ವೆ ಮಾಡಿತ್ತು. 2020ರ ಬಹುನಿರೀಕ್ಷಿತ ಚಿತ್ರಗಳು ಯಾವುವು ಎಂದು ಸಮೀಕ್ಷೆ ಮಾಡಿತ್ತು. ಆ ಸರ್ವೆಯ ಟಾಪ್ 5 ಚಿತ್ರಗಳಲ್ಲಿ ಕೆಜಿಎಫ್ ಚಾಪ್ಟರ್ 2 ನಂ.1 ಸ್ಥಾನದಲ್ಲಿದೆ.

ಕೆಜಿಎಫ್ ನಂತರದ ಸ್ಥಾನಗಳಲ್ಲಿ ಅಕ್ಷಯ್ ಕುಮಾರ್, ಅಜಯ್ ದೇವಗನ್, ರಣ್‍ವೀರ್ ಸಿಂಗ್ ಚಿತ್ರಗಳಿವೆ. ಇದು ಹೆಮ್ಮೆಯ ಜೊತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ. ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು ಚಿತ್ರವನ್ನು ಕೆಜಿಎಫ್ ಚಾಪ್ಟರ್ 1ಗಿಂತ ಅದ್ಭುತವಾಗಿ ತೆರೆಯ ಮೇಲೆ ತರಲು ಪ್ರೇರೇಪಣೆ ನೀಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

Shivarjun Movie Gallery

KFCC 75Years Celebrations and Logo Launch Gallery