` ಶಿವಣ್ಣ ಈಗ ಶಿವಣ್ಣ ಸ್ವಾಮಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivanna wears ayyappa swamy maala
Shivanna Wears Ayyappa Swamy Maala

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪ್ರತಿ ವರ್ಷ ಅಯ್ಯಪ್ಪ ಮಾಲೆ ಧರಿಸುತ್ತಾರೆ. ಅದು ಡಾ.ರಾಜ್ ಕಾಲದಿಂದಲೂ ಬಂದಿರೋ ನಂಬಿಕೆ, ಪದ್ಧತಿ. ಹಲವು ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬರುತ್ತಿರೋ ಸಂಪ್ರದಾಯವನ್ನು ಈ ವರ್ಷವೂ ಪಾಲಿಸುತ್ತಿದ್ದಾರೆ ಶಿವಣ್ಣ ಸ್ವಾಮಿ.

ಶಿವರಾತ್ರಿ ಮುಗಿದ ಮಾರನೇ ದಿನವೇ ಶಿವರಾಜ್ ಕುಮಾರ್, ನಿರ್ದೇಶಕ ರಘುರಾಮ್ ಸೇರಿದಂತೆ ಗೆಳೆಯರ ಜೊತೆಗೆ ಮಾಲೆ ಹಾಕಿಕೊಂಡಿದ್ದಾರೆ. ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯ ಅಯ್ಯಪ್ಪ ಸ್ವಾಮಿ ದೇವಾಲಯಲ್ಲಿ ಪೂಜೆ ಸಲ್ಲಿಸಿ, ಮಾಲೆ ಧರಿಸಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹ ಜೊತೆಗಿದ್ದರು. ಮಾರ್ಚ್ 14 ರಂದು ಬೆಂಗಳೂರಿನಿಂದ ಶಬರಿಮಲೆಗೆ ಹೊರಟು ಅಯ್ಯಪ್ಪನ ದರ್ಶನ ಪಡೆಯಲಿದ್ದಾರೆ ಶಿವಣ್ಣ.

Shivarjun Movie Gallery

KFCC 75Years Celebrations and Logo Launch Gallery