ಅಣ್ಣ ದರ್ಶನ್ ಮತ್ತು ತಮ್ಮ ಅಭಿಷೇಕ್ ಅಂಬರೀಷ್ ಒಂದೇ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಅಭಿಷೇಕ್ ಅಭಿನಯದ ಮೊದಲ ಚಿತ್ರದಲ್ಲಿಯೇ ಅತಿಥಿ ನಟನಾಗಿ ಬಂದು ತಮ್ಮನಿಗೆ ಶುಭ ಕೋರಿದ್ದ ದರ್ಶನ್, ಮತ್ತೊಮ್ಮೆ ಅಭಿಷೇಕ್ ಜೊತೆ ನಟಿಸಲಿದ್ದಾರೆ. ಆ ಚಿತ್ರಕ್ಕೆ ನಿರ್ಮಾಪಕ ಮುನಿರತ್ನ.
ವಿಂಗ್ ಕಮಾಂಡರ್ ಅಭಿನಂದನ್ ಆಗಿ ದರ್ಶನ್ ನಟಿಸಲಿರುವ ಚಿತ್ರವದು. ಆ ಚಿತ್ರದಲ್ಲಿ ಅಭಿಷೇಕ್ ಕೂಡಾ ಇರುತ್ತಾರೆ. ಕಥೆಯ ಎಳೆ ಫೈನಲ್ ಆಗಿದ್ದು, ಕೆಲವೇ ದಿನಗಳಲ್ಲಿ ಚಿತ್ರ ಶುರುವಾಗಲಿದೆ. ಚಿತ್ರದ ಟೈಟಲ್ ವಿಂಗ್ ಕಮಾಂಡರ್ ಅಭಿನಂದನ್. ಕುರುಕ್ಷೇತ್ರ 100ನೇ ದಿನದ ಸಂಭ್ರಮದಲ್ಲಿ ಮುನಿರತ್ನ ಈ ವಿಷಯ ಹೇಳಿಕೊಂಡಿದ್ದಾರೆ.