ಕೆಂಡ ಸಂಪಿಗೆ ಚಿತ್ರ ಬಂದಿತ್ತಲ್ಲ, ಆ ಹೊತ್ತಿಗೇ ಸೂರಿ ಕಾಗೆ ಬಂಗಾರದ ಕಥೆ ಹೇಳಿದ್ದರು. ಅಷ್ಟೇ ಅಲ್ಲ, ಕೆಂಡ ಸಂಪಿಗೆಯೇ 2ನೇ ಭಾಗ. ಕಾಗೆ ಬಂಗಾರ ಮೊದಲನೆಯದ್ದು ಎಂದಿದ್ದರು. ಈಗ ಪಾಪ್ ಕಾರ್ನ್ ಮಂಕಿ ಟೈಗರ್ ಮೂಲಕ ಬೆಚ್ಚಿ ಬೀಳಿಸಿರುವ ಸೂರಿ, ಮತ್ತೊಮ್ಮೆ ಕಾಗೆ ಬಂಗಾರ ನೆನಪಿಸಿದ್ದಾರೆ.
ಕೆಂಡ ಸಂಪಿಗೆ ಸಿರೀಸ್‍ನಲ್ಲಿ 3 ಭಾಗ ಮಾಡುವುದಾಗಿ ಹೇಳಿದ್ದ ಸೂರಿ, ಪಾರ್ಟ್ 2 ಗಿಣಿಮರಿ ಕೇಸ್ ಮುಗಿಸಿದ್ದಾರೆ. ಪ್ರೇಕ್ಷಕರನ್ನೂ ಗೆದ್ದಿದ್ದಾರೆ. ಮೊದಲನೆ ಪಾರ್ಟ್ ಕಾಗೆ ಬಂಗಾರ ಮತ್ತು 3ನೇ ಪಾರ್ಟ್ ಬ್ಲಾಕ್ ಮ್ಯಾಜಿಕ್ ಬರಬೇಕಿದೆ.
ಕೆಂಡ ಸಂಪಿಗೆ ಮಗಿದ ಜಾಗದಿಂದಲೇ ಮಂಕಿ ಟೈಗರ್ ಶುರುವಾಗುತ್ತದೆ. ಆದರೆ ಕಾಗೆ ಬಂಗಾರ ಮುಂದುವರೆಯಲ್ಲ. ಮಂಕಿ ಟೈಗರ್ ಕಥೆ ಬಿಚ್ಚಿಕೊಳ್ಳುತ್ತದೆ. ಒಟ್ಟಿನಲ್ಲಿ ಸೂರಿ ಕಾಗೆ ಬಂಗಾರ ಮರೆತಿಲ್ಲ. ಈಗ ಮಂಕಿ ಟೈಗರ್ ಚಿತ್ರದಲ್ಲೂ ಗೆದ್ದಿರುವ ಸೂರಿ, ಮುಂದಿನ ಚಾಲೆಂಜ್ ಎಂದು ಕಾಗೆ ಬಂಗಾರ ಕೈಗೆತ್ತಿಕೊಳ್ತಾರಾ..?