ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಮಂಜುನಾಥ್ ಮದುವೆಗೆ ಈಗಾಗಲೇ ಎಂಗೇಜ್‍ಮೆಂಟ್ ಆಗಿದೆ. ಏಪ್ರಿಲ್ 17ಕ್ಕೆ ಮದುವೆ. ಇನ್ನೂ ಸುಮಾರು 2 ತಿಂಗಳು ಟೈಂ ಇರುವಾಗಲೇ ಸಿದ್ಧತೆ ಶುರುವಾಗಿದೆ. ಮದುವೆ ಕಾರ್ಯಕ್ಕಾಗಿ ರಾಮನಗರದ ಜಾನಪದ ಲೋಕದಲ್ಲಿ ಸುಮಾರು 90 ಎಕರೆ ಪ್ರದೇಶದಲ್ಲಿ ಸಿದ್ಧತೆ ಹಮ್ಮಿಕೊಳ್ಳಲಾಗಿದೆ.
ಮದುವೆಯ ಸಿದ್ಧತೆಗೆ ಭೂಮಿ ಪೂಜೆ ನೆರವೇರಿದ್ದು, ಕುಮಾರಸ್ವಾಮಿ-ಅನಿತಾ ದಂಪತಿ ಹಾಗೂ ಮಂಜುನಾಥ್-ಶ್ರೀದೇವಿ ದಂಪತಿ ಪೂಜೆಯಲ್ಲಿ ಪಾಲ್ಗೊಂಡರು.
ಮದುವೆಗೆ ಎಲ್ಲರಿಗೂ ಮುಕ್ತ ಆಹ್ವಾನವಿದೆ. ನಮ್ಮ ಪಕ್ಷದ ಕಾರ್ಯಕರ್ತರು, ಮತದಾರರು ಎಲ್ಲರೂ ಬಂದು ಹಾರೈಸಬೇಕು ಎಂದು ಮನವಿ ಮಾಡಿದ್ದಾರೆ ಕುಮಾರಸ್ವಾಮಿ.