ಅವನ ಇಡೀ ಕಥೆ ಹೇಳೋದು ರವಿಶಂಕರ್. ಅದೇ.. ಕೋಟಿಗೊಬ್ಬ 2ನಲ್ಲಿ ಮಂಗ ಆಗಿ ಜೈಲು ಸೇರಿರ್ತಾನಲ್ಲ.. ಅದೇ ಪೊಲೀಸ್ ಆಫೀಸರ್ ರವಿಶಂಕರ್. ಅವನೊಬ್ಬ ಇಂಟರ್ ನ್ಯಾಷನಲ್ ಕಿಲಾಡಿ ಸರ್, ನಾನು ಆಗಲೇ ಹೇಳಿದ್ದರೂ ಯಾರೂ ನಂಬಿರಲಿಲ್ಲ ಎನ್ನುತ್ತಾ ಕಥೆ ಶುರು ಹಚ್ಚಿಕೊಳ್ತಾನೆ. ಕಿಚ್ಚ ಸ್ಟೈಲಿಷ್ ಆಗಿ ಕಾಣಿಸಿಕೊಂಡು ಬೆರಗು ಹುಟ್ಟಿಸಿದ್ರೆ, ಸ್ಟಂಟುಗಳು ಮೈನವಿರೇಳಿಸುತ್ತವೆ. ಇದು ಕೋಟಿಗೊಬ್ಬ 3 ಟೀಸರ್ ಕೊಟ್ಟಿರೋ ಸಣ್ಣ ಝಲಕ್.
ಮಲ್ಲು ಚೆಲುವೆ ಮಡೋನ್ನಾ ಸೆಬಾಸ್ಟಿಯನ್ ಹೀರೋಯಿನ್. ಕೋಟಿಗೊಬ್ಬ 2 ಮುಂದುವರಿದ ಭಾಗ ಅಂದ್ರೆ ನಿತ್ಯಾ ಮೆನನ್ ಇರಬೇಕಿತ್ತಲ್ಲವಾ ಎಂದೆನ್ನಿಸಬಹುದೇನೋ.. ಅದಕ್ಕೆ ನಿರ್ದೇಶಕ ಶಿವ ಕಾರ್ತಿಕ್ ಉತ್ತರ ಕೊಡೋದಿರಲಿ, ಸುಳಿವನ್ನೂ ಕೊಡೋದಿಲ್ಲ. ಕಿಚ್ಚನ ಜೊತೆ ಬರೋ ಆ ಮಗು ಯಾರು..? ಹುಳ ಬಿಟ್ಟಂಗೆ ಬಿಟ್ಟು ಟೀಸರ್ ಮುಗಿಸ್ತಾರೆ ಶಿವಕಾರ್ತಿಕ್.
ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಟೀಸರ್ ಅದ್ಧೂರಿಯಾಗಿದೆ. ಬೇಸಗೆಯ ರಜಕ್ಕೇ ಬರ್ತಾನಂತೆ ಕೋಟಿಗೊಬ್ಬ. ಅಂದಹಾಗೆ.. ರವಿಶಂಕರ್ ಹೇಳೋ ಕೊನೆ ಡೈಲಾಗ್ ಏನ್ ಗೊತ್ತಾ.. ಅವನು ಇಬ್ಬರಲ್ಲ ಸಾರ್.. ಒಬ್ಬನೇ..