` 16ನೇ ಶತಮಾನದ ರಕ್ತಸಿಕ್ತ ಕಥೆ ಬಿಚ್ಚುಗತ್ತಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bicchugathi is 16th century period drama based on palegaras of chitradurga
Bicchugathi Movie Image

ಚಿತ್ರದುರ್ಗದ ಇತಿಹಾಸ ಗೊತ್ತಿದ್ದವರಿಗೆ ಮದಕರಿ ನಾಯಕನ ಕಥೆಯಷ್ಟೇ ಅಲ್ಲ, ಆಗ ನಡೆದ ದಳವಾಯಿ ದಂಗೆಯೂ ಗೊತ್ತಿರುತ್ತೆ. ಆ ದಳವಾಯಿ ದಂಗೆಯ ಕುರಿತು ಬಿ.ಎಲ್‌. ವೇಣು ಅವರು ಬರೆದಿದ್ದ  ಕಾದಂಬರಿ ಈಗ ಬಿಚ್ಚುಗತ್ತಿ ಸಿನಿಮಾ ಆಗಿದೆ. ಚಿತ್ರಕಥೆಯೂ ಅವರದ್ದೇ.

ಹದಿನಾರನೇ ಶತಮಾನದ ಅಂತ್ಯ ದುರ್ಗದ ಪಾಲಿಗೆ ಕರಾಳ ದಿನ. ಆಗ ಅಧಿಕಾರಕ್ಕಾಗಿ ನಡೆದ ನೆತ್ತರಿನ ಕಥೇಯೇ ಬಿಚ್ಚುಗತ್ತಿ. ಫೆ. 28ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್, ಹರಿಪ್ರಿಯಾ ಪ್ರಧಾನ ಪಾತ್ರಗಳಲ್ಲಿದ್ದಾರೆ.

ರಾಜವರ್ಧನ್ ಭರಮಣ್ಣನಾಗಿದ್ದಾರೆ. ದೇಹ ದಂಡಿಸಿದ್ದಾರೆ. ಕುದುರೆ ಸವಾರಿ, ಕಳರಿಯಪಟ್ಟು ಕಲಿತಿದ್ದಾರೆ. ಹರಿಪ್ರಿಯಾ ಕೂಡಾ ಹಿಂದೆ ಬಿದ್ದಿಲ್ಲ. ಸಿದ್ಧಾಂಬೆಯ ಪಾತ್ರಕ್ಕೆ ಅವರೂ ಕತ್ತಿ ವರಸೆ, ಕುದುರೆ ಸವಾರಿ ಕಲಿತು ನಟಿಸಿದ್ದಾರೆ. ಹರಿ ಸಂತೋಷ್ ನಿರ್ದೇಶನದ ಚಿತ್ರ ಐತಿಹಾಸಿಕ ಚಿತ್ರ ಎಂಬ ಕಾರಣಕ್ಕೇ ಕುತೂಹಲ ಹುಟ್ಟಿಸಿರುವ ಚಿತ್ರ.

Shivarjun Movie Gallery

KFCC 75Years Celebrations and Logo Launch Gallery