ಚಿರಂಜೀವಿ ಸರ್ಜಾ, ಶ್ರುತಿ ಹರಿಹರನ್, ಸಂಗೀತಾ ಭಟ್ ನಟಿಸಿರುವ ಆದ್ಯಾ ಈಗ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಕೆ.ಎಂ.ಚೈತನ್ಯ ನಿರ್ದೇಶಕ. ಇಷ್ಟಿದ್ದರೂ.. ಈ ಚಿತ್ರದಲ್ಲಿ ಹೀರೋ ನಾನಲ್ಲ. ಕಥೆ ಎನ್ನುತ್ತಿದ್ದಾರೆ ನಾಯಕ ಚಿರಂಜೀವಿ ಸರ್ಜಾ.
ಇದು ಪ್ರೇಕ್ಷಕನನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುವ ಸಿನಿಮಾ. ಒಬ್ಬ ಬಿಸಿನೆಸ್‍ಮನ್ ಸುಮಾರು ವರ್ಷಗಳ ನಂತರ ಬೆಂಗಳೂರಿಗೆ ಬಂದಾಗ ಅನೇಕ ಸಮಸ್ಯೆಗಳು ಅವನ ಕಣ್ಣಿಗೆ ಬೀಳುತ್ತವೆ. ಆಗ ಆತ ತಾನು ಈ ಹಿಂದೆ ಯಾವತ್ತೂ ನೋಡಿರದೇ ಇದ್ದ ವ್ಯಕ್ತಿಯನ್ನು ಹುಡುಕಿಕೊಂಡು ಹೊರಡುತ್ತಾನೆ. ಅದು ಆದ್ಯಾ ಎನ್ನುವ ಹುಡುಗಿ. ಇದು ಟೋಟ್ಟಲ್ಲಿ ಥ್ರಿಲ್ಲಿಂಗ್ ಸ್ಟೋರಿ ಎನ್ನುತ್ತಾರೆ ಚಿರು.
ಆಟಗಾರ, ಆಕೆ, ಅಮ್ಮ ಐ ಲವ್ ಯೂ ನಂತರ ಕೆ.ಎಂ.ಚೈತನ್ಯ ಮತ್ತೊಮ್ಮೆ ಚಿರು ಜೊತೆ ಮಾಡಿರುವ ಚಿತ್ರವಿದು. ಟಿ.ಜಿ.ವಿಶ್ವಪ್ರಸಾದ್, ರಘುನಾಥ್ ಎಸ್. ನಿರ್ಮಾಣದ ಸಿನಿಮಾದ ಟ್ರೇಲರ್ ಥ್ರಿಲ್ ಕೊಡುತ್ತಿದೆ.