` `ರಾಜಕುಮಾರಿ, ಜೊತೆ ಶಿವ ರಾಜಕುಮಾರನ ಆರ್‍ಡಿಎಕ್ಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shivarajkumar's rdx begins
Shivarajkumar Image

ರಾಜಕುಮಾರ ಚಿತ್ರದ ಹೀರೋಯಿನ್ ಪ್ರಿಯಾ ಆನಂದ್ ಈಗ ಶಿವಣ್ಣನಿಗೆ ಜೋಡಿಯಾಗಿದ್ದಾರೆ. ಹೊಸ ಚಿತ್ರ ಆರ್‍ಡಿಎಕ್ಸ್‍ನಲ್ಲಿ. ಶಿವಣ್ಣ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ದಿನದಂದೇ ಚಿತ್ರಕ್ಕೆ ಮುಹೂರ್ತವೂ ನೆರವೇರಿದೆ. ಎಲ್ಲವನ್ನೂ ಸಿದ್ಧಪಡಿಸಿಕೊಂಡು ಇದೇ ದಿನಕ್ಕಾಗಿ ಕಾದು ಫೆ.19ರಂದೇ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ.

ಕಾಲಿವುಡ್ ನಿರ್ದೇಶಕ ರವಿ ಅರಸು ನಿರ್ದೇಶನದ ಆರ್‍ಡಿಎಕ್ಸ್‍ನಲ್ಲಿ ಶಿವರಾಜ್ ಕುಮಾರ್ ಪೊಲೀಸ್ ಅಧಿಕಾರಿಯಾಗಿದ್ದಾರೆ. ಚೆನ್ನೈನ ಜ್ಯೋತಿ ಫಿಲಂಸ್, ಹಲವು ವರ್ಷಗಳ ಬಳಿಕ ಕನ್ನಡದಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಬಾಲಿವುಡ್ ನಟ ರಾಜ್‍ವೀರ್ ಸಿಂಗ್, ಕಾಲಿವುಡ್ ನಟ ಪವನ್ ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ.

Shivarjun Movie Gallery

KFCC 75Years Celebrations and Logo Launch Gallery