ಟ್ವಿಟ್ಟರ್ನಲ್ಲಿ ಆಗಾಗ್ಗೆ ಇಂಥಾದ್ದೊಂದು ತರಲೆ ನಡೀತಾ ಇರುತ್ತೆ. ಟ್ವಿಟ್ಟರ್ ಇಂಡಿಯಾ ಇದ್ಯಲ್ಲ.. ಅದು ನಮ್ಮ ಅಕೌಂಟ್ನಲ್ಲಿ ಏನ್ ಸಮಾಚಾರ ಅನ್ನುತ್ತೆ..? ಹೌದು, ಇದು ಟ್ವಿಟ್ಟರ್ ಇಂಡಿಯಾದ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಮಾಡಿದ ಟ್ವೀಟ್. ಇದಕ್ಕೆ ಹಲವರು ಹಲವು ಸ್ಟೈಲಲ್ಲಿ ರಿಯಾಕ್ಷನ್ ಕೊಟ್ರೆ, ಡಾಲಿ ಧನಂಜಯ್ ಕೊಟ್ಟ ಉತ್ತರವೇ ಬೇರೆ.
ಇದೇ ಶಿವರಾತ್ರಿಗೆ ರಿಲೀಸ್ ಆಗ್ತಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ನೋಡಿ ಅನ್ನೋ ಮೂಲಕ, ಟ್ವಿಟರ್ಗೇ ಟ್ರೆಂಡ್ ಕೊಟ್ಟಿದ್ದಾರೆ ಡಾಲಿ. ದುನಿಯಾ ಸೂರಿ ನಿರ್ದೇಶನದ ಮಂಕಿ ಟೈಗರ್ ಇದೇ ವಾರ ರಿಲೀಸ್ ಆಗುತ್ತಿದ್ದು, ಸೂರಿ ಒನ್ಸ್ ಎಗೇಯ್ನ್ ಭೂಗತ ಜಗತ್ತಿನ ಕಥೆ ಹೆಣೆದಿದ್ದಾರೆ. ನಿವೇದಿತಾ, ಅಮೃತಾ ಅಯ್ಯಂಗಾರ್ ಮತ್ತು ಸಪ್ತಮಿ ಗೌಡ ನಟಿಸಿರುವ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆಯ ವಾಸನೆ ಇದೆ. ಸುಧೀರ್ ಕೆ.ಎಂ. ನಿರ್ಮಾಣದ ಚಿತ್ರ ಸೂರಿ ಮತ್ತು ಡಾಲಿ ಒಟ್ಟಿಗೇ ಇರುವ ಕಾರಣಕ್ಕೇ ಸೆನ್ಸೇಷನ್ ಸೃಷ್ಟಿಸಿದೆ.