ಹ್ಯಾಟ್ರಿಕ್ ಹೀರೋ ಎಂಬ ಬಿರುದನ್ನು ಮೊನ್ನೆ ಮೊನ್ನೆ ಕೊಟ್ಟ ಹಾಗಿದೆ. ಸೆಂಚುರಿ ಸ್ಟಾರ್ ಪಟ್ಟ ಹತ್ತಿದ ಮೇಲೂ ಅಷ್ಟೇ ಆಕ್ಟಿವ್ ಆಗಿರುವ ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಬಂದು 34 ವರ್ಷ. ವಯಸ್ಸು 58 ವರ್ಷ. ಆನಂದ್ ಚಿತ್ರದಿಂದ ಆರ್‍ಡಿಎಕ್ಸ್‍ವರೆಗೆ ಶಿವಣ್ಣ ಬದಲಾಗದೇ ಇರುವುದು ವ್ಯಕ್ತಿತ್ವದಲ್ಲಿ. ನಟನಾಗಿ ಒಂದೊಂದೇ ಮಜಲು ಏರುತ್ತಿರುವ ಶಿವರಾಜ್ ಕುಮಾರ್ ಮನಸ್ಸಿಗೆ ಅನ್ನಿಸಿದ್ದನ್ನು ಓಪನ್ ಆಗಿ ಹೇಳಿ ಬಿಡ್ತಾರೆ. ಈ ಬಾರಿಯೂ ಅಷ್ಟೇ.. ನೀವು ರಾಜ್‍ಕುಮಾರ್ ಸ್ಟೈಲ್ ಫಾಲೋ ಮಾಡ್ತೀರಾ ಎಂಬ ಪ್ರಶ್ನೆ ಎದುರಾದಾಗ ಶಿವಣ್ಣ ಉತ್ತರಿಸಿದ್ದು ಹೀಗೆ.
ನನಗೆ ವಯಸ್ಸು 58 ಆಗಿದೆ. ಹಾಗಂತ ಜೀನ್ಸ್, ಟೀಷರ್ಟ್ ಹಾಕಬಾರದು ಅಂತಾ ರೂಲ್ಸ್ ಇದೆಯಾ..? ನಾನು ಸಾಧು ಅಲ್ಲ. ಮನುಷ್ಯ. ಆಸೆಗಳಿವೆ. ಚೆನ್ನಾಗಿ ಕಾಣಬೇಕು, ಜನ ನೋಡಬೇಕು ಅನ್ನೋ ಆಸೆಯಿದೆ. ಅಪ್ಪ ಹಾಗೆ ಇರ್ತಿದ್ರು ಅಂತಾ ನಾನೂ ಹಾಗೇ ಇರೋಕೆ ಆಗಲ್ಲ. ಅವರು ರಾಜ್‍ಕುಮಾರ್. ರಾಜ್‍ಕುಮಾರ್ ಒಬ್ಬರೇ ಆಗಿರಲಿ, ಅದು ನನ್ನ ಆಸೆ. ಅವರನ್ನು ಫಾಲೋ ಮಾಡೋಣ, ಅವರ ಸ್ಟೈಲ್‍ಗಳನ್ನಲ್ಲ. ಅಪ್ಪನ ಸ್ಟೈಲ್ ಅಪ್ಪನದ್ದು. ಇದು ಅವರ ಮಗನ ಫಿಗರ್ ಎಂದಿದ್ದಾರೆ ಶಿವಣ್ಣ.