ಆಶಿಕಾ ರಂಗನಾಥ್ ಎಂಬ ಚೆಲುವೆ ಕನ್ನಡ ಚಿತ್ರರಸಿಕರ ಎದೆಯಲ್ಲಿ ಚುಟು ಚುಟು ಹಾಡಿರುವುದು ಎಲ್ಲರಿಗೂ ಗೊತ್ತು. ಅಂತಾದ್ರಲ್ಲಿ ಅವರ ಕೆನ್ನೆಗೆ ಕಿಡಿಗೇಡಿಯೊಬ್ಬ ಬಲವಂತವಾಗಿ ಕಿಸ್ ಮಾಡಿದ್ರೆ ಹೇಗಾಗಬೇಡ..? ಅದೊಂದು ವಿಡಿಯೋ ವೈರಲ್ ಆಗಿ ಎಲ್ಲೆಡೆ ಚರ್ಚೆಯಾಗೋಕೆ ಶುರುವಾಗಿದೆ. ಎಂತೆಂತಾ ಹುಚ್ಚರಿರ್ತಾರಪ್ಪಾ ಎಂದು ಎಲ್ಲರೂ ಶಾಕ್ ಆಗಿರೋವಾಗಲೇ ಘಟನೆಯ ಅಸಲಿ ಸತ್ಯ ಹೊರಬಿದ್ದಿದೆ.
ಅದು ಸಿನಿಮಾ ಸೀನ್. ಪವನ್ ಒಡೆಯರ್ ನಿರ್ದೇಶಿಸುತ್ತಿರುವ ರೇಮೋ ಚಿತ್ರದ ಶೂಟಿಂಗ್. ಅಷ್ಟೇ ಹೊರತು ರಿಯಲ್ ಘಟನೆ ಅಲ್ಲ. ಸ್ವತಃ ಪವನ್ ಒಡೆಯರ್ ಇದನ್ನು ಸ್ಪಷ್ಟಪಡಿಸಿದ್ದಾರೆ.
ಪವನ್ ಒಡೆಯರ್ ನಿರ್ದೇಶನದ ರೇಮೋ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿ. ರೋಗ್ ಖ್ಯಾತಿಯ ಇಶಾನ್ ಹೀರೋ. ಕಿಡಿಗೇಡಿಯೊಬ್ಬ ಅಶಿಕಾ ಕೆನ್ನೆಗೆ ಮುತ್ತು ಕೊಟ್ಟು, ನಂತರ ಹೀರೋ ಫೈಟ್ ಮಾಡುವ ಸೀನ್ ಚಿತ್ರೀಕರಣದ ವೇಳೆ ಯಾರೋ ಮೊಬೈಲ್ನಲ್ಲಿ ಶೂಟ್ ಮಾಡಿ ಸೋಷಿಯಲ್ ಮೀಡಿಯಾಗೆ ಬಿಟ್ಟಿದ್ದಾರೆ. ಅದು ಸಿನಿಮಾ ಸೀನ್. ರಿಯಲ್ ಆಗಿದ್ದರೆ ಅಂತಹವನಿಗೆ ತಕ್ಕ ಶಾಸ್ತಿ ಮಾಡ್ತಿದ್ದೆ ಎಂದಿದ್ದಾರೆ ಅಶಿಕಾ ರಂಗನಾಥ್.