2017, ಸೆಪ್ಟೆಂಬರ್ 15. ಭರ್ಜರಿ ರಿಲೀಸ್ ಆದ ಡೇಟ್. ಅದು ಮುಗಿದ ಕೆಲವೇ ದಿನಗಳಲ್ಲಿ ಸೆಟ್ಟೇರಿದ ಸಿನಿಮಾ ಪೊಗರು. 2 ವರ್ಷ ಕಳೆದುಹೋಗಿ, ಇನ್ನೇನು ರಿಲೀಸ್ ಆಗುವ ಡೇಟ್ ಹತ್ತಿರ ಬಂದಾಗಿದೆ. ಇದೇ ಏಪ್ರಿಲ್‍ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಆದರೆ.. ಅದೇ ತಿಂಗಳು ರಾಬರ್ಟ್ ಬರುತ್ತಿದೆ. ಹೀಗಾಗಿ ನಿರ್ದೇಶಕ ನಂದ ಕಿಶೋರ್ ಒಂದು ಸ್ಪಷ್ಟನೆ ಕೊಟ್ಟಿದ್ದಾರೆ. ಬರೋದೇನಿದ್ದರೂ ರಾಬರ್ಟ್ ನಂತರವೇ ಎಂದಿದ್ದಾರೆ ನಂದ ಕಿಶೋರ್.
ಚಿತ್ರ ಯಾಕೆ ಲೇಟ್ ಆಯ್ತು ಎಂದು ಹೇಳೋಕಾಗಲ್ಲ. ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡಿದ್ದೇನೆ ಎನ್ನುವ ನಂದ, ಈ ಚಿತ್ರ ಧ್ರುವ ಸರ್ಜಾ ಕೆರಿಯರ್‍ನಲ್ಲಿ ಬೇರೆಯದೇ ಲೆವೆಲ್ಲಿನ ಸಿನಿಮಾ ಎನ್ನುತ್ತಾರೆ.
ತಾಯಿ ಮತ್ತು ಬಾಂಧವ್ಯದ ಸುತ್ತ ಇರುವ ಕಥೆ ಇದು. ಸಣ್ಣ ಭಿನ್ನಾಭಿಪ್ರಾಯ ಮನುಷ್ಯನ ಮನಸ್ಸಿನ ಮೇಲೆ ಏನೆಲ್ಲ ಪರಿಣಾಮ ಬೀರುತ್ತವೆ. ನಮ್ಮ ತಪ್ಪುಗಳು, ಕರ್ಮಫಲಗಳದ್ದೇ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಧ್ರುವ ಎಕ್ಸ್‍ಟ್ರೀಮ್ ಆಗಿ ನಟಿಸಿದ್ದರೆ, ರಶ್ಮಿಕಾ ಮಂದಣ್ಣ ಸೂಕ್ಷ್ಮಮನಸ್ಸಿನ ಶಿಕ್ಷಕಿಯಾಗಿ ನಟಿಸಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್ ಗುರುವಿನ ಪಾತ್ರದಲ್ಲಿದ್ದಾರೆ. ಬಿ.ಕೆ.ಗಂಗಾಧರ್ ಚಿತ್ರದ ನಿರ್ಮಾಪಕ.