ನೀನೆ ಮೊದಲು ನೀನೇ ಕೊನೆ.. ಎಂಬ ಹಾಡಿನ ಮೂಲಕ ಪ್ರೇಮಿಗಳ ಎದೆಯಲ್ಲಿ ಸಂಚಲನ ಮೂಡಿಸಿದ್ದ ಸಿನಿಮಾ ಕಿಸ್. ಎ.ಪಿ.ಅರ್ಜುನ್ ನಿರ್ದೇಶನದ ಕಿಸ್ ಶತದಿನೋತ್ಸವ ಪೂರೈಸಿದ ಸಂಭ್ರಮ ಪೂರೈಸಿದೆ.
ವಿರಾಟ್ ಮತ್ತು ಶ್ರೀಲೀಲಾ ಎಂಬ ಎರಡು ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿ ಮತ್ತೊಮ್ಮೆ ಗೆದ್ದಿದ್ದಾರೆ ಎ.ಪಿ.ಅರ್ಜುನ್. ಶತದಿನೋತ್ಸವ ಹಿನ್ನೆಲೆಯಲ್ಲಿ ಚಿತ್ರದ ಕಲಾವಿದರು, ತಂತ್ರಜ್ಞರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯ್ತು. ಇದೇ ವೇಳೆ ಎ.ಪಿ.ಅರ್ಜುನ್ ತಮ್ಮ ಹೊಸ ಚಿತ್ರ ಲವರ್ ಶೀರ್ಷಿಕೆ ಅನಾವರಣಗೊಳಿಸಿದರು.