ರಾಬರ್ಟ್ ಚಿತ್ರದ ಟೀಸರ್ ಹೊರಬಿದ್ದಿದೆ. ಚಿತ್ರದ ಟೈಟಲ್ ರಾಬರ್ಟ್. ಆದರೆ.. ಟೀಸರ್‍ನಲ್ಲಿರೋದು ರಾಮ ಮತ್ತು ರಾವಣ. ದರ್ಶನ್ ಹುಟ್ಟುಹಬ್ಬಕ್ಕೆಂದೇ ರಿಲೀಸ್ ಮಾಡಿದ ಟೀಸರ್‍ನಲ್ಲಿ ರಾಮನಾಗಿ.. ರಾವಣನಾಗಿ.. ದರ್ಶನ್ ಅಕ್ಷರಶಃ ಗಹಗಹಿಸಿದ್ದಾರೆ.
ಹಿಂದಿನ ಟೀಸರ್‍ನಲ್ಲಿ ಆಂಜನೇಯನ ಅವತಾರದಲ್ಲಿಕಾಣಿಸಿಕೊಂಡು ಬೆರಗು ಹುಟ್ಟಿಸಿದ್ದ ದರ್ಶನ್, ಇಲ್ಲಿ ರಾಮ ಮತ್ತು ರಾವಣನಾಗಿ ಎರಡು ವಿಭಿನ್ನ ಹೇರ್ ಸ್ಟೈಲ್ ಮತ್ತು ಗೆಟಪ್ಪುಗಳಲ್ಲಿ ಎಂಟ್ರಿ ಕೊಟ್ಟಿದ್ದಾರೆ.
ಅವನು ತಾಳ್ಮೆಯಲ್ಲಿ ಶ್ರೀರಾಮ.. ಮಾತು ಕೊಟ್ಟರೆ ದಶರಥ ರಾಮ.. ಪ್ರೀತಿಗೆ ಜಾನಕಿ ರಾಮ.. ತಿರುಗಿಬಿದ್ದರೆ ರಾವಣ ಎನ್ನುವ ಆಶಾ ಭಟ್ ಧ್ವನಿ ರಾಬರ್ಟ್ ಪಾತ್ರದ ಗುಣಗಳನ್ನು ಪರಿಚಯ ಮಾಡಿಸುತ್ತೆ.
ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಏಪ್ರಿಲ್‍ನಲ್ಲಿ ರಿಲೀಸ್ ಆಗಲಿದೆ. ಉಮಾಪತಿ ನಿರ್ಮಾಣದ ಚಿತ್ರದಲ್ಲಿ ದರ್ಶನ್ ಜೊತೆಗೆ ವಿನೋದ್ ಪ್ರಭಾಕರ್, ಸೋನಲ್ ಮಂಥೆರೋ, ಐಶ್ವರ್ಯಾ ಪ್ರಸಾದ್ ಕೂಡಾ ನಟಿಸಿದ್ದಾರೆ.