ವಿಭಿನ್ನ ಕಥೆ, ಥ್ರಿಲ್ ಕೊಡುವ ನಿರೂಪಣೆ, ಹೊಸ ಅನುಭವ ಕೊಡುವ ಚಿತ್ರಕಥೆ, ಸಸ್ಪೆನ್ಸ್, ಟ್ವಿಸ್ಟ್.. ಎಲ್ಲವನ್ನೂ ಇಟ್ಟುಕೊಂಡು ಗೆದ್ದ ಸಿನಿಮಾ ಜಂಟಲ್‍ಮನ್. ತಮಿಳು, ತೆಲುಗಿನಲ್ಲಿಯೂ ರೀಮೇಕ್ ಡಿಮ್ಯಾಂಡ್ ಸೃಷ್ಟಿಸಿಕೊಂಡ ಜಂಟಲ್‍ಮನ್ ಚಿತ್ರವನ್ನು ನೋಡಿ ಮೆಚ್ಚಿದ ಸ್ಟಾರ್‍ಗಳಿಗೇನೂ ಕಡಿಮೆಯಿಲ್ಲ.
ಡಾಲಿ ಧನಂಜಯ್, ರಕ್ಷಿತ್ ಶೆಟ್ಟಿ, ನಿರ್ದೇಶಕ ಸಿಂಪಲ್ ಸುನಿ, ಒಳ್ಳೆ ಹುಡ್ಗ ಪ್ರಥಮ್.. ಹೀಗೆ ಹಲವರು ಚಿತ್ರದ ಬಗ್ಗೆ ಮೆಚ್ಚಿ ಚಿತ್ರಕ್ಕೆ ಶುಭ ಕೋರಿದ್ದಾರೆ. ಇನ್ನು ಚಿತ್ರದ ಆಡಿಯೋ ರಿಲೀಸ್ ಮಾಡಿ ಶುಭ ಕೋರಿದ್ದವರು ದರ್ಶನ್. ಒಟ್ಟಿನಲ್ಲಿ ಒಂದು ವಿಭಿನ್ನ ಚಿತ್ರಕ್ಕೆ ಇಡೀ ಚಿತ್ರರಂಗವೇ ಬೆನ್ನಿಗೆ ನಿಂತು ಗೆಲ್ಲಿಸುತ್ತಿದೆ.
ಜಡೇಶ್ ಕುಮಾರ್ ನಿರ್ದೇಶನ, ಗುರು ದೇಶಪಾಂಡೆ ನಿರ್ಮಾಣ, ಪ್ರಜ್ವಲ್, ನಿಶ್ವಿಕಾ, ಆರಾಧ್ಯ ಅಭಿನಯ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ.. ಎಲ್ಲಕ್ಕಿಂತ ಜಂಟಲ್‍ಮನ್ ಚಿತ್ರವನ್ನು ಗೆಲ್ಲಿಸಿರುವುದು ಸಂಪೂರ್ಣ ಹೊಸದೇ ಎನ್ನಿಸುವ ಕಥೆ.