ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ರಿಲೀಸ್ ಆಗೋಕೆ ರೆಡಿ. ಟಗರು ನಂತರ ಸೂರಿ ನಿರ್ದೇಶಿಸಿರುವ ಚಿತ್ರವಾದ್ದರಿಂದ ಕುತೂಹಲ ಬೆಟ್ಟದಷ್ಟಿದೆ. ಜೊತೆಗೆ ಡಾಲಿ ಧನಂಜಯ್ ಅವರ ಭಯಂಕರ ಲುಕ್ಕೂ ಕಿಕ್ಕು ಕೊಟ್ಟಿದೆ. ಹೀಗಿರುವಾಗಲೇ ಚಿತ್ರಕ್ಕೆ ಇನ್ನೊಂದು ಭರ್ಜರಿ ಪವರ್ ಸಿಕ್ಕಿದೆ.
ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ಸ್ಟಾರ್ ಪಟ್ಟಕ್ಕೇರಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿದ್ದಾರೆ. ಶಿವರಾತ್ರಿಗೆ ಮಂಕಿ ಟೈಗರ್ ದರ್ಶನವಾಗಲಿದೆ. ಥಿಯೇಟರುಗಳಲ್ಲಿ, ಟಿವಿಗಳಲ್ಲಿ ಹಾಗೂ ಡಿಜಿಟಲ್ ಮಾರ್ಕೆಟ್ಟಿನಲ್ಲೂ ಚಿತ್ರಕ್ಕೆ ಭಾರೀ ಡಿಮ್ಯಾಂಡ್ ಇದೆ.
ಬಿಡುಗಡೆಗೆ ಮುನ್ನವೇ ಚಿತ್ರ 10 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆಯಂತೆ. ಡಾಲಿ ಧನಂಜಯ್ ಜೊತೆಗೆ ನಿವೇದಿತಾ, ಅಮೃತಾ ನಟಿಸಿದ್ದಾರೆ. ಅಂದಹಾಗೆ ಟಗರು ಫೆ.23ರಂದು ರಿಲೀಸ್ ಆಗಿತ್ತು. ಮಂಕಿ ಟೈಗರ್ ಫೆಬ್ರವರಿ 23ಕ್ಕೆ ರಿಲೀಸ್ ಆಗುತ್ತಿದೆ.