` ಕೆಜಿಎಫ್ ಚಾಪ್ಟರ್ 2 ತೆಲುಗು ರೈಟ್ಸ್ 40 ಕೋಟಿ ಅಲ್ಲ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
news about kgf chapter 2 telugu remake rights is false
KGF Chapter 2 Movie Image

ಕೆಜಿಎಫ್ ಚಾಪ್ಟರ್ 2 ಚಿತ್ರದ ತೆಲುಗು ರೈಟ್ಸ್ 40 ಕೋಟಿಗೆ ಸೇಲ್ ಆಗುತ್ತಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸಂಭ್ರಮ ಸೃಷ್ಟಿಸಿತ್ತು. ಚಿತ್ರಲೋಕದಲ್ಲೂ ಈ ವರದಿ ನೋಡಿದ್ದೀರಿ. ಆದರೆ.. ಅದು ಸುಳ್ಳು ಎಂದಿದ್ದಾರೆ ವಿತರಕ ಕಾರ್ತಿಕ್ ಗೌಡ. ಹೊಂಬಾಳೆ ಫಿಲಂಸ್ನ ಪ್ರಮುಖರಲ್ಲಿ ಒಬ್ಬರಾಗಿರುವ ಕಾರ್ತಿಕ್ ಗೌಡ, 40 ಕೋಟಿಯ ವ್ಯವಹಾರವನ್ನು ತಳ್ಳಿ ಹಾಕಿದ್ದಾರೆ.

ಆದರೆ.. ಕೆಜಿಎಫ್ ಚಿತ್ರಕ್ಕೆ ತೆಲುಗಿನಲ್ಲಿ ಒಳ್ಳೆಯ ಡಿಮ್ಯಾಂಡ್ ಇರುವುದಂತೂ ನಿಜ. ಏಕೆಂದರೆ, ಕೆಜಿಎಫ್ ನಂತರ ಅಲ್ಲೀಗ ಯಶ್ ಫ್ಯಾನ್ಸ್ ಕ್ಲಬ್ ಹುಟ್ಟಿಕೊಂಡಿದೆ. ಪ್ರಶಾಂತ್ ನೀಲ್ ಚಿತ್ರ ಸೃಷ್ಟಿಸಿದ್ದ ಸಂಚಲನ, ಚಾಪ್ಟರ್ 2ಗೆ ಭರ್ಜರಿ ಓಪನಿಂಗ್ ಕೊಡಲಿದೆ ಎಂಬುದರಲ್ಲಿ ಡೌಟೇ ಇಲ್ಲ. ವಿಜಯ್ ಕಿರಗಂದೂರು ನಿರ್ಮಾಣದ ಚಿತ್ರ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದ್ದು, ಚಾಪ್ಟರ್ 2ನಲ್ಲಿ ಸಂಜಯ್ ದತ್, ರವೀನಾ ಟಂಡನ್ ಸೇರ್ಪಡೆಗೊಂಡಿದ್ದಾರೆ. ಕೆಜಿಎಫ್ 2 ಮಾರ್ಕೆಟ್ ವ್ಯಾಲ್ಯೂ ತಿಳಿಯೋಕೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು.