ಶಿವಾಜಿ ಸುರತ್ಕಲ್ ದಿ ಕೇಸ್ ಆಫ್ ರಣಗಿರಿ ರಹಸ್ಯದ ಕಥೆ ಏನು ಎಂದರೆ.. ಅದೊಂದು ಕೊಲೆ ಮತ್ತು ನಿಗೂಢ ಊರಿನ ಚರಿತ್ರೆ ಬಿಚ್ಚಿಕೊಳ್ಳುತ್ತೆ. ವಿಭಿನ್ನ ಕಥಾಹಂದರ ಇರುವ ಈ ಚಿತ್ರದಲ್ಲಿ ರಮೇಶ್ ಅಭಿನಯವೇ ಹೈಲೈಟ್. ಜೊತೆಗೆ ಹಿನ್ನೆಲೆ ಸಂಗೀತ ಚಿತ್ರದ ಅತಿದೊಡ್ಡ ಪ್ಲಸ್ ಎನ್ನುವ ನಿರ್ದೇಶಕ ಶ್ರೀವತ್ಸ, ಈ ಚಿತ್ರದಲ್ಲಿ ಸೌಂಡ್ ಎಫೆಕ್ಟ್ಗೆ ವಿಶೇಷ ಪ್ರಾಧಾನ್ಯತೆ ಕೊಟ್ಟಿದ್ದಾರೆ.
ಇಲ್ಲಿಯವರೆಗೂ ಕೇಳದ ಕೆಲವು ಬಗೆಯ ಸದ್ದುಗಳನ್ನು ಚಿತ್ರದಲ್ಲಿ ಬಳಸಿದ್ದೇವೆ. ಪಿಲ್ಲೊ ಕವರ್, ಪೆನ್, ಪೆನ್ಸಿಲ್, ಕಾಡುಗಳಲ್ಲಿಕೇಳಿ ಬರುವ ಪ್ರಾಣಿಪಕ್ಷಿ, ಮಂಜಿನ ವಾತಾವರಣ ಹೀಗೆ ಸಣ್ಣ ಸಣ್ಣ ಸಂಗತಿಯೂ ಅನುಭವಕ್ಕೆ ಬರುವಂತೆ ಸೌಂಡ್ ಡಿಸೈನ್ ಮಾಡಿದ್ದೇವೆ. ರಮೇಶ್ ಅರವಿಂದ್ ಅವರಿಗೆ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ರಾಧಿಕಾ ನಾರಾಯಣ್ ಮತ್ತು ಆರೋಹಿ ನಾರಾಯಣ್. ಆದರೆ.. ಚಿತ್ರದ ಇನ್ನೊಂದು ವಿಶೇಷವೆಮದರೆ, ಪ್ರೇಕ್ಷಕನೂ ಪತ್ತೇದಾರನಾಗುತ್ತಾನೆ.
ಪ್ರತಿ ನಿಮಿಷಕ್ಕೊಂದು ಸಾಕ್ಷಿ, ಕುತೂಹಲ ಇರುವ ಸಿನಿಮಾ ನೋಡುತ್ತಿರುವಾಗ ಪ್ರೇಕ್ಷಕನೂ ಡಿಟೆಕ್ಟಿವ್ ರೀತಿಯಲ್ಲೇ ಫೀಲ್ ಆಗ್ತಾನೆ. ಸಿನಿಮಾ ನೊಡುತ್ತಲೇ.. ಕೊಲೆ ರಹಸ್ಯ ಭೇದಿಸುವ ಅನುಭವ ಪ್ರೇಕ್ಷಕನಿಗೆ ಸಿಗಲಿದೆ ಎನ್ನುತ್ತಾರೆ ಶ್ರೀತ್ವಸ.
ಈ ಸಿನಿಮಾವನ್ನು ಆಕಾಶ್ ಶ್ರೀವತ್ಸ ನಿರ್ದೇಶಿಸಿದ್ದರೆ, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ . ರೇಖಾ ಕೆಎನ್ ಹಾಗೂ ಅನೂಪ್ ಗೌಡ ನಿರ್ಮಾಪಕರು. ರಮೇಶ್ ಅರವಿಂದ್ ಮೇಕ್ ಓವರ್ ಅಚ್ಚರಿ ಹುಟ್ಟಿಸುವಂತಿದೆ.