ಕೆಜಿಎಫ್ ಚಾಪ್ಟರ್ 2 ಚಿತ್ರ ಇನ್ನೂ ಶೂಟಿಂಗ್ ಹಂತದಲ್ಲಿಯೇ ಇದೆ. ಆದರೆ ಚಿತ್ರಕ್ಕೆ ಸೃಷ್ಟಿಯಾಗಿರುವ ಡಿಮ್ಯಾಂಡ್ ಮಾತ್ರ ಆಕಾಶಕ್ಕೇರಿದೆ. ಕೆಜಿಎಫ್ ಚಾಪ್ಟರ್ 2 ತೆಲುಗು ವರ್ಷನ್‍ಗೆ 40 ಕೋಟಿ ಡಿಮ್ಯಾಂಡ್ ಮಾಡಲಾಗುತ್ತಿದೆ. ಈ ಬಿಸಿನೆಸ್ ಫೈನಲ್ ಸ್ಟೇಜ್‍ನಲ್ಲಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತೆಲುಗು ವರ್ಷನ್ ರಿಲೀಸ್ ಆಗಲಿದ್ದು, ವಿತರಕರು 30 ಕೋಟಿಯ ಆಫರ್ ಕೊಟ್ಟರಂತೆ. ಅಫ್‍ಕೋರ್ಸ್.. ಕನ್ನಡದ ಮಟ್ಟಿಗೆ ಅದೂ ಕೂಡಾ ದಾಖಲೆಯೇ. ಈಗ 40 ಕೋಟಿಯ ಆಸುಪಾಸು ವ್ಯವಹಾರ ಕುದುರಿದೆ ಎನ್ನಲಾಗಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸೃಷ್ಟಿಸಿದ ಹವಾ ಎಫೆಕ್ಟ್, ಚಾಪ್ಟರ್ 2ಗೆ ಡಿಮ್ಯಾಂಡ್ ಬಂದಿದೆ. ಸಿನಿಮಾ ಡಿಸೆಂಬರ್‍ನಲ್ಲಿ ರಿಲೀಸ್ ಆಗುವ ಚಾನ್ಸ್ ಇದೆ.