` ದಾಖಲೆಯಲ್ಲೇ ಇಲ್ಲದ ರಣಗಿರಿಯಲ್ಲಿ ಏನದು ರಹಸ್ಯ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
no evidence left but ranagairi rahasya continues
Ramesh Aravind Image from Shivaji Suratkal Movie

ಶಿವಾಜಿ ಸುರತ್ಕಲ್ ದಿ ಕೇಸ್‌ ಆಫ್‌ ರಣಗಿರಿ ರಹಸ್ಯ. ಇದು ರಮೇಶ್ ಅಭಿನಯದ ಹೊಸ ಸಿನಿಮಾ. ಟ್ರೇಲರ್ ಥ್ರಿಲ್ ಕೊಟ್ಟಿದೆ. ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಆದರೆ.. ಎಲ್ಲಿದೆ ರಣಗಿರಿ ಎಂದು ಹುಡುಕಹೊರಟರೆ.. ಅದು ಗೂಗಲ್ ಮ್ಯಾಪ್ನಲ್ಲೂ ಸಿಕ್ಕಲ್ಲ.

ನಿರ್ದೇಶಕ ಆಕಾಶ್‌ ಶ್ರೀವತ್ಸ. ಅವರೇ ಹೇಳೋ ಹಾಗೆ ‘ಗೂಗಲ್‌ ಮ್ಯಾಪ್‌ನಲ್ಲಿಯೂ ಸಿಗದ ಹೊರಜಗತ್ತಿನ ಜೊತೆ ಸಂಪರ್ಕವೇ ಇಲ್ಲದ ಕಾಡಿನೊಳಗೆ ಇರುವ ಊರು ರಣಗಿರಿ. ನಿಗೂಢತೆಯನ್ನೇ ಹಾಸಿ ಹೊದ್ದು ಉಸಿರಾಡುವ ರಣಗಿರಿಯಲ್ಲಿ ನಡೆಯುವ ಹೈ ಪ್ರೊಫೈಲ್‌ ಕೊಲೆ. ಆ ಕೊಲೆ ಕೇಸ್ನ್ನು  ಕೇವಲ 48 ಗಂಟೆಗಳಲ್ಲಿ ಭೇದಿಸುವ ಸವಾಲು ಹೊತ್ತು ಹೊರಡುವ ಪತ್ತೇದಾರ ಶಿವಾಜಿ ಸುರತ್ಕಲ್.  ಆಗ ಎದುರಿಸುವ ಟೆನ್ಷನ್, ಪರ್ಸನಲ್ ಪ್ರಾಬ್ಲಂ, ಕನ್ಫ್ಯೂಷನ್ನುಗಳೇ ಚಿತ್ರದ ಕಥೆ’.

ಕಥೆಯಷ್ಟೇ ಅಲ್ಲ, ಚಿತ್ರದಲ್ಲಿ ರಮೇಶ್ ಅರವಿಂದ್ ಅವರ ಭಾವಾಭಿನಯ, ವಿಭಿನ್ನವಾದ ಸೌಂಡ್ ಎಫೆಕ್ಟ್ ಎಲ್ಲವೂ ಪ್ರೇಕ್ಷಕರಿಗೆ ಬೇರೆಯದೇ ಫೀಲ್ ಕೊಡುತ್ತವೆ ಎನ್ನುತ್ತಾರೆ ಶ್ರೀವತ್ಸ. ರೇಖಾ ಕೆಎನ್‌ ಹಾಗೂ ಅನೂಪ್‌ ಗೌಡ ನಿರ್ಮಿಸಿರುವ ಚಿತ್ರದಲ್ಲಿ ರಮೇಶ್‌ ಜೊತೆ ರಾಧಿಕಾ ನಾರಾಯಣ್‌, ಅರೋಹಿ ನಾರಾಯಣ್‌ ಪ್ರಧಾನ ಪಾತ್ರಗಳಲ್ಲಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery