ಎಸ್ಪಿ ಬಾಲಸುಬ್ರಹ್ಮಣ್ಯಂ ತಮ್ಮ ಸ್ವಂತ ಮನೆಯನ್ನೇ ವೇದ ಶಾಲೆ ನಿರ್ಮಾಣಕ್ಕೆ ದಾನ ಕೊಟ್ಟಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ತಿಪ್ಪರಾಜುವಾರಿ ಅನ್ನೋ ಬೀದಿಯಿದೆ. ಆ ಬೀದಿಯಲ್ಲಿರೋ ತಮ್ಮ ಸ್ವಂತ ಮನೆಯನ್ನು ಕಂಚಿ ಮಠಕ್ಕೆ ದಾನ ಕೊಟ್ಟಿದ್ದಾರೆ ಎಸ್ಪಿಬಿ.
ಕಂಚಿ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮಿ ಅವರಿಗೆ ತಮ್ಮ ಮನೆಯನ್ನು ವಿಧಿವತ್ತಾಗಿ ದಾನ ಕೊಟ್ಟಿದ್ದಾರೆ. ಇನ್ನು ಮುಂದೆ ಅಲ್ಲಿ ಎಸ್ಪಿಬಿ ಅವರ ತಂದೆ ಎಸ್ಪಿ ಸಾಂಬಮೂರ್ತಿ ಹೆಸರಿನಲ್ಲಿ ಶಾಲೆ ನಡೆಯಲಿದೆ.
ಇದು ನಾನು ಕಂಚಿ ಪೀಠಕ್ಕೆ ನೀಡುತ್ತಿರುವ ದಾನವಲ್ಲ. ಭಗವಂತನ ಸೇವೆಗೆ ಭಗವಂತನೇ ಇದನ್ನು ಸ್ವೀಕರಿಸಿದ್ದಾನೆ. ನನ್ನ ತಂದೆ ಇಲ್ಲಿಯೇ ಇದ್ದಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ ಎಸ್ಪಿಬಿ.