ಕೆಜಿಎಫ್ ಚಾಪ್ಟರ್ 2, ರವೀನಾ ಟಂಡನ್ ಬಹಳ ವರ್ಷಗಳ ನಂತರ ಕನ್ನಡದಲ್ಲಿ ಅಭಿನಯಿಸುವಂತೆ ಮಾಡಿದ ಸಿನಿಮಾ. 1999ರಲ್ಲಿ ಬಂದಿದ್ದ ಸಿನಿಮಾ ಸೂಪರ್ ಹಿಟ್. ಆ ಚಿತ್ರದಲ್ಲಿ ಕೀರ್ತಿಯಾಗಿ ನಟಿಸಿದ್ದರು ರವೀನಾ ಟಂಡನ್. ಅದಾದ ನಂತರ 20 ವರ್ಷಗಳ ಬಳಿಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ, ಕೆಜಿಎಫ್ ಚಾಪ್ಟರ್ 2 ಮೂಲಕ.
ನಿರ್ದೇಶಕ ಪ್ರಶಾಂತ್ ನೀಲ್ ನನಗೆ ಮೊದಲು ಕಥೆಯ ಒನ್ ಲೈನ್ ಹೇಳಿದ್ದರು. ನಂತರ ಸ್ಕ್ರಿಪ್ಟ್ ಮತ್ತು ಪಾತ್ರವನ್ನು ವಿವರಿಸಿದ್ದರು. ಆಗಿನ್ನೂ ಕೆಜಿಎಫ್ ಚಾಪ್ಟರ್ 1 ಬಂದಿರಲಿಲ್ಲ. ಅದಾದ ಮೇಲೆ ಕೆಜಿಎಫ್ ನೋಡಿದೆ. ಕಥೆ, ಪಾತ್ರ ಇಷ್ಟವಾಯ್ತು. ಚಿತ್ರದಲ್ಲಿ ನನ್ನದು ಅತ್ಯಂತ ಸ್ಟ್ರಾಂಗ್ ಕ್ಯಾರೆಕ್ಟರ್. ಹೀಗಾಗಿ ಒಪ್ಪಿಕೊಂಡೆ ಎಂದಿದ್ದಾರೆ ರವೀನಾ ಟಂಡನ್.
1999ರಲ್ಲಿ ಉಪೇಂದ್ರ ಚಿತ್ರ ಬಂದಾಗ ಅದು ಆಗಿನ ಕಾಲಕ್ಕೆ ತುಂಬಾ ಫಾರ್‍ವರ್ಡ್ ಇತ್ತು. ಹಲವು ವರ್ಷಗಳ ಮುಂದಿನ ಆಲೋಚನೆ ಆ ಚಿತ್ರದಲ್ಲಿತ್ತು. ಈಗ ಕೆಜಿಎಫ್ ಕೂಡಾ ಅಷ್ಟೆ ಎಂದಿದ್ದಾರೆ ರವೀನಾ ಟಂಡನ್. ಶೂಟಿಂಗ್ ಶುರುವಾಗಿದೆ.