ದರ್ಶನ್ ಹುಟ್ಟುಹಬ್ಬ ಎಂದಿನಂತೆ ಈ ಬಾರಿಯೂ ಸಮಾಜಸೇವೆಯ ಕೆಲಸಗಳೊಂದಿಗೆ ನಡೆಯಲಿದೆ. ಅಭಿಮಾನಿಗಳು ದರ್ಶನ್ ಮನೆಗೆ ಆಗಮಿಸಿ ಶುಭ ಕೋರುತ್ತಾರೆ. ಕೇಕ್ ಚೆಲ್ಲಾಡುವುದಿಲ್ಲ. ಪಟಾಕಿ ಸಿಡಿಯುವುದಿಲ್ಲ. ಹಾರಾಟ.. ಕೂಗಾಟ.. ಇರುವುದಿಲ್ಲ. ಬದಲಿಗೆ ಅಭಿಮಾನಿಗಳು ಧವಸಧಾನ್ಯ ಸಂಗ್ರಹಿಸಿ ಅನಾಥಾಶ್ರಮ, ಮಠ, ವೃದ್ಧಾಶ್ರಮಗಳಿಗೆ ತಲುಪಿಸುವ ಕೈಂಕರ್ಯ ಮಾಡುತ್ತಾರೆ. ಇದೆಲ್ಲದರ ಜೊತೆಗೆ ರಾಬರ್ಟ್ ಚಿತ್ರತಂಡ ಒಂದು ಉಡುಗೊರೆ ಕೊಡುತ್ತಿದೆ. ರಾಬರ್ಟ್ ಟೀಸರ್ ರಿಲೀಸ್ ಮಾಡುತ್ತಿದೆ.
ಈಗಾಗಲೇ ಚಿತ್ರೀಕರಣ ಮುಗಿಸಿರುವ ರಾಬರ್ಟ್ ಚಿತ್ರತಂಡ, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಫೆ.16ರ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಟೀಸರ್ ರಿಲೀಸ್ ಆಗಲಿದೆ.
ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ಉಮಾಪತಿ ದರ್ಶನ್ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಸೆಲಬ್ರೇಟ್ ಮಾಡಲು ಪ್ಲಾನ್ ಮಾಡಿದ್ದಾರೆ.