` ಹುಬ್ಬಳ್ಳಿಗೆ ಬರ್ತಾರವ್ವಾ ದರ್ಶನ್, ಪ್ರಜ್ವಲ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan and prajwal will be in hubbali for inspector vikram audio launch
Darshan, Prajwal Devaraj

ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ಎನ್ನುವ ಹಾಡು ಯಾವಾಗ ಇವರ ಕಿವಿಗೆ ಬಿತ್ತೋ ಏನೋ.. ಹುಬ್ಬಳ್ಳಿಗೆ ಹೊರಟು ನಿಂತಿದ್ದಾರೆ ದರ್ಶನ್ ಮತ್ತು ಪ್ರಜ್ವಲ್. ಜಂಟಲ್‍ಮನ್ ಚಿತ್ರಕ್ಕೆ ಸಿಗುತ್ತಿರುವ ಭರ್ಜರಿ ಪ್ರತಿಕ್ರಿಯೆಗೆ ಖುಷಿ ಖುಷಿಯಾಗಿರೋ ಪ್ರಜ್ವಲ್ ಅವರ ಇನ್ನೊಂದು ಸಿನಿಮಾ ಇನ್ಸ್‍ಪೆಕ್ಟರ್ ವಿಕ್ರಂ ರಿಲೀಸ್ ಆಗೋಕೆ ರೆಡಿ. ಆಡಿಯೋ ರಿಲೀಸ್ ನಡೆಯುತ್ತಿರೋದು ಹುಬ್ಬಳ್ಳಿಯಲ್ಲಿ.

ಪ್ರಜ್ವಲ್ ದೇವರಾಜ್ ಅಭಿನಯದ 30ನೇ ಸಿನಿಮಾ ಇನ್ಸ್‍ಪೆಕ್ಟರ್ ವಿಕ್ರಂ. ಫೆ.14ರಂದು ನಡೆಯೋ ಆಡಿಯೋ ರಿಲೀಸ್ ಕಾರ್ಯಕ್ರಮದ ಮುಖ್ಯ ಅತಿಥಿ ದರ್ಶನ್. ಈ ಚಿತ್ರದಲ್ಲಿ ದರ್ಶನ್ ಅತಿಥಿ ನಟರಾಗಿಯೂ ನಟಿಸಿದ್ದಾರೆ. ಅದೂ ಭಗತ್ ಸಿಂಗ್ ಪಾತ್ರದಲ್ಲಿ. ನರಸಿಂಹ ನಿರ್ದೇಶನದ ಚಿತ್ರದಲ್ಲಿ ಪ್ರಜ್ವಲ್‍ಗೆ ಭಾವನಾ ನಾಯಕಿ.