ಚಾರ್ಲಿ 777 ಚಿತ್ರ ಶುರುವಾಗಿದೆ. ಅವನೇ ಶ್ರೀಮನ್ನಾರಾಯಣನ ಗುಂಗಿನಿಂದ ಹೊರಬಂದ ರಕ್ಷಿತ್ ಶೆಟ್ಟಿ, ಈಗ ಧರ್ಮನಾಗಿ ಬದಲಾಗಿದ್ದಾರೆ. ಚಾರ್ಲಿ ಚಿತ್ರದ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದ್ದು, ರಕ್ಷಿತ್ ಶೆಟ್ಟಿ ಗೋವಾದಲ್ಲೇ ಬೀಡುಬಿಟ್ಟಿದ್ದಾರೆ.
ನಾಯಿಯ ಜೊತೆ ಹೆಚ್ಚೂ ಕಡಿಮೆ ಅರ್ಧ ಭಾರತ ರೌಂಡ್ ಹೊಡೆಯುತ್ತಾರಂತೆ ಧರ್ಮ ಅರ್ಥಾತ್ ರಕ್ಷಿತ್. ಅಂದಹಾಗೆ ಚಾರ್ಲಿ 777 ಅನ್ನೋದು ನಾಯಿಯ ಹೆಸರು.
ಕಿರಣ್ ರಾಜ್ ನಿರ್ದೇಶನದ ಚಾರ್ಲಿ 777 ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಬೇಬಿ ಶರ್ವರಿ ರಕ್ಷಿತ್ ಶೆಟ್ಟಿಯ ಬಾಲ್ಯದ ಪಾತ್ರದಲ್ಲಿ ನಟಿಸಿದ್ದಾರೆ.