ತಿರುನಲ್ಲೂರು, ಪಾಂಡಿಚೆರಿ ಸಮೀಪ ಇರುವ ಈ ಶನೇಶ್ವರ ದೇಗುಲ ಪುರಾಣ ಪ್ರಸಿದ್ಧ. ಈ ದೇಗುಲದ ನೆತ್ತಿಯ ಮೇಲೆ ಸ್ಯಾಟಲೈಟ್‍ನಿಂದ ಸಿಗ್ನಲ್‍ಗಳು ಸಿಗಲ್ಲ. ವಿಮಾನಗಳು ಈ ದೇವಸ್ಥಾನದ ಮೇಲೆ ಹಾರಲು ಯತ್ನಿಸಿದ್ರೂ ಸಾಧ್ಯವಾಗಲ್ಲ. ಈ ಬಗ್ಗೆ ನಾಸಾದ ವಿಜ್ಞಾನಿಗಳೂ ಪರೀಕ್ಷೆ ಮಾಡಲು ಹೋಗಿ ಸೋತಿದ್ದಾರೆ.
ಪುರಾಣ ಕಾಲದಲ್ಲಿ ಶನಿಯ ಕೆಂಗಣ್ಣಿಗೆ ತುತ್ತಾದ ನಳ ಮಹಾರಾಜ, ಶಾಪವನ್ನು ಕಳೆದುಕೊಂಡ ಕೊಳ ನಳಕೊಳ ಇರುವುದು ಇದೇ ದೇಗುಲದಲ್ಲಿ. ಇಂತಹ ದೇಗುಲಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಮೇತ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ.
ಶನಿಯ ಮಕರ ರಾಶಿ ಪ್ರವೇಶಿಸಿದ ನಂತರ ಹಲವರ ರಾಶಿಗಳಲ್ಲಿ ಬದಲಾವಣೆಗಳಾಗಿವೆ. ಹೀಗಾಗಿಯೇ ದರ್ಶನ್ ಕುಟುಂಬ ಸಮೇತ ಶನಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.