ನಟನೆಯಲ್ಲೇ ನಗು ಉಕ್ಕಿಸೋ ಶರಣ್, ಕಣ್ಣಿನಲ್ಲೇ ಕಚಗುಳಿ ಕೊಡುವ ಅಶಿಕಾ ರಂಗನಾಥ್.. ಇವರಿಬ್ಬರನ್ನೂ ಪೆನ್ನಿನಲ್ಲಿ ಚುಚ್ಚಿ, ಮಾತಿನಲ್ಲಿ ಚಚ್ಚಿ ನಗೆಯುಕ್ಕಿಸುವ ಸುನಿ. ಕಾಂಬಿನೇಷನ್ ಒಟ್ಟಾದಾಗ ಉದ್ಭವವಾಗಿರುವ ಅವತಾರ ಪುರುಷ, ನಗೆಯ ಹಬ್ಬದೂಟದ ಸೂಚನೆ ಕೊಟ್ಟಿದೆ.
ಜ್ಯೂನಿಯರ್ ಕಲಾವಿದನಾಗಿ ಶರಣ್, ಅವಕಾಶ ಕೊಡುವ ಹುಡುಗಿಯಾಗಿ ಅಶಿಕಾ.. ಅದರ ನಡುವೆ ಮಗನನ್ನು ಕಳೆದುಕೊಂಡವರ ಕಥೆ, ಇನ್ನೊಂದು ದಿಕ್ಕಿನಲ್ಲಿ ಬ್ಲಾಕ್ ಮ್ಯಾಜಿಕ್ ಜೊತೆ ಪ್ರತ್ಯಕ್ಷವಾಗಿ ಕಣ್ಣುಗಳಲ್ಲೇ ಭಯ ಹುಟ್ಟಿಸುವ ಶ್ರೀನಗರ ಕಿಟ್ಟಿ.. ಅವತಾರ ಪುರುಷನ ಮೊದಲ ಟೀಸರಿನಲ್ಲೇ ಇಷ್ಟೆಲ್ಲವೂ ಇದೆ.
ನಡು ನಡುವೆ ಒಗ್ಗರಣೆಯಾಗಿ ಚುಟು ಚುಟು ಬರುತ್ತೆ. ಸುನಿಯ ಪೋಲಿತನವಿದೆ. ಭವ್ಯ, ಸುಧಾರಾಣಿ, ಸಾಯಿಕುಮಾರ್ ಕೂಡಾ ನಟಿಸಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ.