18 ಗಂಟೆ ನಿದ್ರೆ ಮಾಡಿ, 6 ಗಂಟೆಯಷ್ಟೇ ಎಚ್ಚರ ಇರುವ ಕುಂಭಕರ್ಣ ಭರತ್ ಅರ್ಥಾತ್ ಪ್ರಜ್ವಲ್ ದೇವರಾಜ್ ನಿದ್ದೆಯಿಂದ ಎದ್ದು ಬಂದು ಥಿಯೇಟರಿಗೆ ಎಂಟ್ರಿ ಕೊಟ್ಟಿದ್ದಾನೆ. ಅಂಡಾಣು ಕಳ್ಳಸಾಗಣೆ ಮತ್ತು ಸ್ಲೀಪಿಂಗ್ ಸಿಂಡ್ರೋಮ್ ಬ್ಯೂಟಿಯಂತಹ ವಿಭಿನ್ನ ಹೊಸತನದ ಕಥೆ ಇರುವ ಚಿತ್ರವಿದು. ಪ್ರೇಕ್ಷಕರಿಗೆ ಸಂಪೂರ್ಣ ಹೊಸದೇ ಎಂಬ ಫೀಲ್ ಕೊಡುವ ಜಂಟಲ್‍ಮನ್ ಚಿತ್ರದಲ್ಲಿ ಸಂಚಾರಿ ವಿಜಯ್ ಪೊಲೀಸ್ ಆಫೀಸರ್ ಆಗಿದ್ದರೆ, ಭರತ್‍ಗೆ ಚಿಕಿತ್ಸೆ ಕೊಡುವ ಡಯಟಿಷಿಯನ್ ಹಾಗೂ ಪ್ರೇಮಿಯಾಗಿ ನಟಿಸಿರುವುದು ತಪಸ್ವನಿ ಅರ್ಥಾತ್ ನಿಶ್ವಿಕಾ ನಾಯ್ಡು.
ಪುಟ್ಟ ಹುಡುಗಿ ಬೇಬಿ ಆರಾಧ್ಯ, ಸೀನಿಯರ್ ಕಲಾವಿದರಿಗೂ ಚಾಲೆಂಜ್ ಹಾಕುವಷ್ಟು ಅದ್ಭುತವಾಗಿ ನಟಿಸಿದ್ದಾಳೆ ಎನ್ನುವುದು ಚಿತ್ರತಂಡದ ಕಾಂಪ್ಲಿಮೆಂಟು. ಸ್ವತಃ ನಿರ್ದೇಶಕರಾಗಿರುವ ಗುರು ದೇಶಪಾಂಡೆ, ಈ ಚಿತ್ರದ ನಿರ್ದೇಶಕ ಜಡೇಶ್ ಕುಮಾರ್ ಹೇಳಿದ ಕಥೆ ಕೇಳಿಯೇ ಥ್ರಿಲ್ ಆಗಿ ತಾವೇ ನಿರ್ಮಾಪಕರಾಗಿದ್ದಾರೆ ಎನ್ನುವುದು ಒನ್ಸ್ ಎಗೇಯ್ನ್ ಕಥೆಯ ಪವರ್.
ಕನ್ನಡದಲ್ಲಿಯೇ ಅತ್ಯಂತ ಸ್ಪೆಷಲ್ ಎನಿಸುವ ಕಥೆ, ನಟನೆ, ಪ್ರೆಸೆಂಟೇಷನ್ ಇರುವ ಜಂಟಲ್‍ಮನ್ ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಿದ್ದಾರೆ. ವೇಯ್ಟ್ & ಸೀ.